ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ಸ್ಥಾನಕ್ಕೆ ಎಸ್.ಆರ್.ಪಾಟೀಲರನ್ನು ಪರಿಗಣಿಸಬೇಕಿತ್ತು: ಎಂ.ಬಿ.ಪಾಟೀಲ

Last Updated 13 ಡಿಸೆಂಬರ್ 2018, 9:49 IST
ಅಕ್ಷರ ಗಾತ್ರ

ಬೆಳಗಾವಿ: ಸಭಾಪತಿ ಆಯ್ಕೆ ವಿಷಯದಲ್ಲಿ ಎಸ್.ಆರ್.ಪಾಟೀಲ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

‘ಎಸ್.ಆರ್.ಪಾಟೀಲರು ಹಿರಿಯರು, ಬಹಳಷ್ಟು ಆಸೆ ಹೊಂದಿದ್ದರು. ಆದರೆ ಪಕ್ಷದ ಕೆಲ ಮಾನದಂಡಗಳಿಂದ ಅವರಿಗೆ ಅವಕಾಶ ಕೈ ತಪ್ಪಿದೆ. ಅವರಿಗೆ ಅವಕಾಶ ಕೈ ತಪ್ಪಿದ್ದಕ್ಕೆ ಸ್ವಾಭಾವಿಕವಾಗಿ ಎಲ್ಲರಿಗೂ ನೋವಾಗಿದೆ’ ಎಂದರು.

ಈ ಹಿಂದೆ ನಮ್ಮ ಪಕ್ಷದ ನಾಯಕರಲ್ಲಿ ನಾವು ವಿನಂತಿ ಮಾಡಿಕೊಂಡಿದ್ದೇವು. ಉತ್ತರ ಕರ್ನಾಟಕ ಹಾಗೂದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳು. ಈ ಎರಡು ಕಣ್ಣುಗಳನ್ನು ಬೇರೆ ಬೇರೆ ಎಂದು ಕಾಣಬಾರದು. ರಾಜ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಕಾಂಗ್ರೆಸ್‌ನಲ್ಲಿ ಹೆಚ್ಚು ಶಾಸಕರು ಉತ್ತರ ಕರ್ನಾಟಕದಿಂಲೇ ಆಯ್ಕೆ ಯಾಗಿದ್ದಾರೆ. ಉತ್ತರ ಕರ್ನಾಟಕ 41 ಶಾಸಕರಲ್ಲಿ 5 ಜನ ಸಚಿವರು ಇದ್ದಾರೆ. ದಕ್ಷಿಣ ಕರ್ನಾಟಕದಲ್ಲಿ 36ರಲ್ಲಿ 9 ಜನ ಸಚಿವರು ಇದ್ದಾರೆ. ಇದರಿಂದಲೇ ಕಾಣುತ್ತಿದೆ.ಉತ್ತರ ಹಾಗೂ ದಕ್ಷಿಣ ಕರ್ನಾಟಕಕ್ಕೆ ಅನ್ಯಾಯ ಆಗಿರುವುದು. ಹೀಗಾಗಿ ಈ ತಾರತಮ್ಯವನ್ನು ಇವತ್ತು ಹೋಗಲಾಡಿಸಬೇಕು. ಪಕ್ಷದ ಪ್ರಮುಖ ಹುದ್ದೆಗಗಳು ಹಾಗೂ ಸರ್ಕಾರದ ಹುದ್ದೆಗಳು ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸಿಕ್ಕಿದೆ. ಹೀಗಾಗಿ ಇದನ್ನು ಸರಿಪಡಿಸಿ, ದಕ್ಷಿಣ ಕರ್ನಾಟಕದಂತೆ ಉತ್ತರಕ್ಕೆ ಮಹತ್ವ ಕೊಡಬೇಕು. ಉತ್ತರ ಕರ್ನಾಟಕ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.

ಉತ್ತರ ಕರ್ನಾಟಕಕ್ಕೆ ಆಗಿರುವ ಈ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇವು. ಎಸ್.ಆರ್. ಪಾಟೀಲ್‌ಗೆ ಆಗಿರುವ ಅನ್ಯಾಯದ ಸರಿಪಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕರನ್ನು ಎಂ.ಬಿ. ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT