ಸೋಲು ಗೆಲುವಿನ ಮೆಟ್ಟಿಲು: ಮಧು ಬಂಗಾರಪ್ಪ

7

ಸೋಲು ಗೆಲುವಿನ ಮೆಟ್ಟಿಲು: ಮಧು ಬಂಗಾರಪ್ಪ

Published:
Updated:

ಶಿವಮೊಗ್ಗ: ಲೋಕಸಭಾ ಚುನಾವಣೆಯ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಫೇಲ್ ಆಗಿದ್ದೇನೆ. ನಾಲ್ಕೇ ತಿಂಗಳಿಗೆ ಮತ್ತೆ ಪರೀಕ್ಷೆ ಬರಲಿದೆ ಆಗ ಉತ್ತಮ ಫಲಿತಾಂಶ ಪಡೆಯುವೆ.

– ಇದು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪ್ರತಿಕ್ರಿಯೆ.

ದಿಢೀರ್ ಎದುರಾದ ಚುನಾವಣೆ. ಸಮಯದ ಅಭಾವ ಸೋಲಿಗೆ ಪ್ರಮುಖ ಕಾರಣ. ಎರಡೂ ಪಕ್ಷಗಳು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದರೂ ತಳ ಹಂತದ ಕಾರ್ಯಕರ್ತರನ್ನು ಮೈತ್ರಿ ಮನೋಸ್ಥಿತಿಗೆ ಸಜ್ಜುಗೊಳಿಸಲು ಸಮಯ ದೊರಕದ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಈ ಒಗ್ಗಟ್ಟು ಮುಂದುವರಿಯಲಿದೆ. ಎರಡೂ ಪಕ್ಷಗಳ ಪ್ರಮುಖರು ಮುಂದಿನ ಅಭ್ಯರ್ಥಿ ನಿರ್ಧರಿಸಲಿದ್ದಾರೆ. ಎಲ್ಲರೂ ಈಗಿನಿಂದಲೇ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಸುಳ್ಳುಗಳ ಸರಮಾಲೆ ಎಣೆದು ಗೆಲುವು ಸಾಧಿಸುತ್ತಿದೆ. ಮತದಾರರಿಗೆ ಮನವರಿಕೆ ಮಾಡುತ್ತೇವೆ. ಮತ್ತೆ ತಕ್ಕಪಾಠ ಕಲಿಸುತ್ತೇವೆ. ಅವರು ಹೇಳಿದಂತೆ ಭಾರಿ ಗೆಲುವಿನ ಅಂತರ ಸಿಕ್ಕಿಲ್ಲ. ಐದು ಲಕ್ಷದಷ್ಟು ಮತದಾರರು ತಮಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಅಹಂಗೆ ಪೆಟ್ಟು ನೀಡಿದ್ದಾರೆ ಎಂದು ವಿಶ್ಲೇಷಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !