ಮಂತ್ರಾಲಯದಲ್ಲಿ ಮಧ್ವ ನವಮಿ ಆಚರಣೆ

7

ಮಂತ್ರಾಲಯದಲ್ಲಿ ಮಧ್ವ ನವಮಿ ಆಚರಣೆ

Published:
Updated:
Prajavani

ರಾಯಚೂರು: ಮಧ್ವನವಮಿ ನಿಮಿತ್ತ ಮಂತ್ರಾಲಯದಲ್ಲಿ ಗುರುವಾರ ಪ್ರಾಣದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳನ್ನು ನೆರವೇರಿಸಲಾಯಿತು.

ಮಧುಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಮಾಡಲಾಯಿತು. ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಂಗಳಾರತಿ ನೆರವೇರಿಸಿ ಮಧ್ವರ ರಥೋತ್ಸವಕ್ಕೆ ಚಾಲನೆ ನೀಡಿದರು.

ಮಠದ ಪ್ರಾಕಾರದಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !