ಮಹದಾಯಿ: ರಾಜ್ಯಕ್ಕೆ 5.5 ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು

7

ಮಹದಾಯಿ: ರಾಜ್ಯಕ್ಕೆ 5.5 ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು

Published:
Updated:

ನವದೆಹಲಿ: ಮಹದಾಯಿ ನ್ಯಾಯಮಂಡಳಿ ಮಂಗಳವಾರ ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟಿಸಿದ್ದು, ರಾಜ್ಯಕ್ಕೆ 5.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. 

ಕಳಸಾ ‌ನಾಲೆಯಿಂದ 1.72 ಟಿಎಂಸಿ ಅಡಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಒಟ್ಟು ಬೇಡಿಕೆಯ 7.56 ಟಿಎಂಸಿ ಅಡಿ ಪೈಕಿ 4 ಟಿಎಂಸಿ ಅಡಿ ಹಂಚಿಕೆ ಮಾಡಿದೆ.

ವಿದ್ಯುಚ್ಛಕ್ತಿ ಉತ್ಪಾದನೆಗೆ 8.02 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಒಟ್ಟು 13.07 ಟಿಎಂಸಿ ಅಡಿ ಹಂಚಿದೆ.

ಅಲ್ಲದೆ 1.50 ಟಿಎಂಸಿ ಅಡಿ ನೀರು ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಳಕೆ ಮಾಡಲು ಹಂಚಿಕೆ ಮಾಡಿದೆ.

ನ್ಯಾಯ ಮಂಡಳಿ ಐ ತೀರ್ಪು ಬಹುತೇಕ ಕರ್ನಾಟಕದ ಪರ‌ ಇದೆ. ಮಲಪ್ರಭಾಗೆ ಕಳಸಾ ಬಂಡೂರಿಯಿಂದ ಕಣಿವೆಯೇತರ ಬಳಕೆಗೆ 4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ಆದೇಶಿಸಿದರು.

ಕರ್ನಾಟಕ‌ವು ಕುಡಿಯಲು ಕಣಿವೆಯ ಆಚೆಯ ತಿರುವು ಯೋಜನೆಗೆ ಕೇಳಿದ್ದ 7.56 ಟಿಎಂಸಿ ಅಡಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರು ನೀಡಿರುವುದು ಬಹುತೇಕ ಸಮಾಧಾನಕರ. ಮಿಕ್ಕ ಪಾಲನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಪಡೆಯಲು ಅವಕಾಶ ಕಲ್ಪಿಸಿದೆ.

ನ್ಯಾಯಮಂಡಳಿ ಒಟ್ಟು 12 ಸಂಪುಟಗಳಲ್ಲಿ ಐ ತೀರ್ಪು ಪ್ರಕಟಿಸಿದೆ. ಐ ತೀರ್ಪಿನ ಎಲ್ಲ ಪ್ರಕಟಿತ ಸಂಪುಟಗಳನ್ನು ಕೇಂದ್ರದ ಜಲಸಂಪನ್ಮೂಲ ಸಚಿವಾಲಯಕ್ಕೆ ನ್ಯಾಯಮಂಡಳಿ ಸಲ್ಲಿಸಿದೆ.

* ಇದನ್ನೂ ಓದಿ...

ಮಹಾದಾಯಿ ತೀರ್ಪು: ನವಲಗುಂದದಲ್ಲಿ ಹೈ ಅಲರ್ಟ್‌

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !