ಸಾಲಕ್ಕೆ ಮೊರೆ

7

ಸಾಲಕ್ಕೆ ಮೊರೆ

Published:
Updated:

ಬೆಂಗಳೂರು: ಮಹದಾಯಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ₹ 800 ಕೋಟಿ ಬೇಕಿದ್ದು, ರಾಜ್ಯ ಸರ್ಕಾರ ಇದಕ್ಕಾಗಿ ₹ 200 ಕೋಟಿ ತೆಗೆದಿರಿಸಿದೆ.

2008ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ ₹ 93 ಕೋಟಿ ಇತ್ತು. 10 ವರ್ಷಗಳ ಅವಧಿಯಲ್ಲಿ ಮೊತ್ತ ₹ 800 ಕೋಟಿಗೆ ತಲುಪಿದೆ. ಸಿದ್ದರಾಮಯ್ಯ ಅವಧಿಯಲ್ಲಿ ₹ 81 ಕೋಟಿ, ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲಿ ₹ 69 ಕೋಟಿ ಮತ್ತು ಡಿ.ವಿ.ಸದಾನಂದಗೌಡ ಅವರ ಅವಧಿಯಲ್ಲಿ ₹30 ಕೋಟಿ ತೆಗೆದಿರಿಸಲಾಗಿತ್ತು. ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದ್ದರಿಂದ, ಕಾಮಗಾರಿಗ
ಳನ್ನು ಸ್ಥಗಿತಗೊಳಿಸಲಾಗಿತ್ತು.

ವಿವಿಧ ಜನಪ್ರಿಯ ಯೋಜನೆಗಳಿಗಾಗಿ ಸರ್ಕಾರಕ್ಕೆ ₹ 44,000 ಕೋಟಿಗಳು ಬೇಕಿದೆ. ಸರ್ಕಾರ ಹಣದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

*****

ತೀರ್ಪಿನ ಪ್ರತಿ ಓದಿದ ಬಳಿಕ ಕಾನೂನು ಪರಿಣಿತರು ಮತ್ತು ರಾಜಕೀಯ ಸಭೆ ನಡೆಯುತ್ತದೆ. ಮುಂದೇನು ಮಾಡಬೇಕು ಎಂಬುದನ್ನು ಆ ಬಳಿಕವೇ ತೀರ್ಮಾನಿಸಲಾಗುತ್ತದೆ.
ರಾಕೇಶ್‌ಸಿಂಗ್‌, ಪ್ರಧಾನಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

ನ್ಯಾಯಮಂಡಳಿಯಿಂದ ಅಲ್ಪ ನ್ಯಾಯ ಸಿಕ್ಕಿದ್ದು, ಪೂರ್ಣ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ
ಬಸವರಾಜ ಬೊಮ್ಮಾಯಿ, ಶಾಸಕ

ತೀರ್ಪಿನ ಕುರಿತು ಚರ್ಚೆ ನಡೆಸಿ ಮರು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತೇವೆ.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !