ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕ ಪಂಚಮಹಾ ವೈಭವ

Last Updated 11 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕದ ಅಂಗವಾಗಿ ಸೋಮವಾರ ಪಂಚಮಹಾ ವೈಭವ ಮಂಟಪದಲ್ಲಿ ಮೊದಲ ತೀರ್ಥಂಕರ ವೃಷಭನಾಥರ ಆಡಳಿತದಲ್ಲಿ ನವಯುಗಾರಂಭದ ಘಟನೆಗಳನ್ನು ರೂಪಕದ ಮೂಲಕ ಸಾದರ ಪಡಿಸಲಾಯಿತು.

ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜೀ ಮುನಿಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ್‌ಜೀ ಮುನಿಮಹಾರಾಜರು, ಮುನಿಸಂಘದವರು, ಕ್ಷುಲ್ಲಕರು ಹಾಗೂ ಮಾತಾಜಿಯವರು ನವಯುಗಾರಂಭದ ದೃಶ್ಯಗಳನ್ನು ನೋಡಿ, ‘ತಾವು ಇಂತಹ ರೂಪಕವನ್ನು ಈವರೆಗೆ ನೋಡಿಲ್ಲ. ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಬಂತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವದಿಸಿದರು.

ರೂಪಕ ಪ್ರದರ್ಶನದ ಬಗ್ಗೆ ಡಿ. ವೀರೇಂದ್ರ ಹೆಗ್ಗಡೆ ಸಂತೋಷ ವ್ಯಕ್ತಪಡಿಸಿದರು. ಹೇಮಾವತಿ ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಶ್ರದ್ಧಾ ಅಮಿತ್ ಮಾರ್ಗದರ್ಶನದಲ್ಲಿ 250 ಕಲಾವಿದರು ಭಾಗವಹಿಸಿ ಅತ್ಯುತ್ತಮ ರೂಪಕ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT