ಗುರುವಾರ , ನವೆಂಬರ್ 21, 2019
27 °C

ಮಹಾರಾಷ್ಟ್ರದ 4 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ: ಉಮೇಶ ಕತ್ತಿ

Published:
Updated:

ಬೆಳಗಾವಿ: ‘ಉತ್ತರ ಕರ್ನಾಟಕದ 13 ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ದಕ್ಷಿಣ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ರಚಿಸಬೇಕು’ ಎಂದು ಶಾಸಕ ಉಮೇಶ ಕತ್ತಿ ಒತ್ತಾಯಿಸಿದರು.

‘ಉತ್ತರ ಕರ್ನಾಟಕದ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಕರಾಡ ಹಾಗೂ ಸಾಂಗ್ಲಿ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯ ರಚಿಸಿದರೆ ಈ ಭಾಗ ಅಭಿವೃದ್ಧಿಯಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಮಹದಾಯಿ ಹರಿಯುವ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಇದರ ಜೊತೆಗೆ ಕೇಂದ್ರದಲ್ಲಿಯೂ ಇದೆ. ಈ ಅವಕಾಶವನ್ನು ಬಳಸಿಕೊಂಡು ತಕ್ಷಣ ಮಹದಾಯಿ ಬಿಕ್ಕಟ್ಟು ಬಗೆಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಿ.ಎಂ ಆಗಿಯೇ ತೀರುತ್ತೇನೆ:‘ಉಪ ಮುಖ್ಯಮಂತ್ರಿಯಾಗುವ ಬಗ್ಗೆ ಹಣೆಬರಹದಲ್ಲಿ ಬರೆದಿಲ್ಲ. ನಾನು ಆಗುವುದೂ ಇಲ್ಲ. ಆಗುವುದಾದರೆ ಮುಖ್ಯಮಂತ್ರಿಯಾಗುತ್ತೇನೆ. ರಾಜ್ಯದ ಸಿ.ಎಂ ಆಗದಿದ್ದರೆ ಉತ್ತರ ಕರ್ನಾಟಕದ ಸಿ.ಎಂ ಗ್ಯಾರಂಟಿ’ ಎಂದರು.

ಪ್ರತಿಕ್ರಿಯಿಸಿ (+)