ಸೋಮವಾರ, ಮೇ 25, 2020
27 °C

ಮನೆಯಲ್ಲೇ ಮಹಾವೀರ ಜಯಂತಿ ಆಚರಿಸಿ : ಕರ್ನಾಟಕ ಜೈನ ಅಸೋಸಿಯೇಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 6ರಂದು ಜೈನ ಸಮುದಾಯದವರು ಮಹಾವೀರ ಜಯಂತಿಯನ್ನು  ಮನೆಯಲ್ಲಿಯೇ ಜಪ ಮತ್ತು ಭಜನೆ ಮಾಡುವ ಮೂಲಕ ಆಚರಿಸಬೇಕು ಎಂದು ಕರ್ನಾಟಕ ಜೈನ ಅಸೋಸಿಯೇಷನ್ ಮನವಿ ಮಾಡಿದೆ. 

'ಕೊರೊನಾ ಸೋಂಕಿನಿಂದ ಹೆಚ್ಚಿನ ಅನಾಹುತ ಆಗದಂತೆ ತಡೆಯುವ ಮತ್ತು ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದ್ದು, ರಾಜ್ಯದ ಜಿನ ಮಂದಿರಗಳಲ್ಲಿ ಮತ್ತು ಮಹಾವೀರ ಭವನಗಳಲ್ಲಿ ಯಾವುದೇ ರೀತಿಯ ಜಯಂತ್ಯುತ್ಸವ ಅಥವಾ ಮೆರವಣಿಗೆ, ಸಾಮೂಹಿಕ ಪೂಜಾ-ಅಭಿಷೇಕ ಮಹೋತ್ಸವ ಜರುಗಿಸುವಂತಿಲ್ಲ' ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಹೇಳಿದ್ದಾರೆ. 

'ಬಸದಿಗಳಲ್ಲಿ ಇಬ್ಬರು ಅಥವಾ ಮೂವರು ಪುರೋಹಿತರು ಮಾತ್ರ ಇದ್ದು, ಬೆಳಿಗ್ಗೆ ಪೂಜೆ ಮಾಡುವುದು ಸೂಕ್ತ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ಜೈನ ಮಠಗಳ ಎಲ್ಲ ಭಟ್ಟಾರಕ ಸ್ವಾಮೀಜಿಗಳು ಸಮ್ಮತಿಸಿದ್ದಾರೆ' ಎಂಬುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು