ಇಂದಿರಮ್ಮ, ಬಾಬಣ್ಣಗೆ ಮಾಲತಿಶ್ರೀ ರಂಗಪ್ರಶಸ್ತಿ

ಶುಕ್ರವಾರ, ಮಾರ್ಚ್ 22, 2019
24 °C

ಇಂದಿರಮ್ಮ, ಬಾಬಣ್ಣಗೆ ಮಾಲತಿಶ್ರೀ ರಂಗಪ್ರಶಸ್ತಿ

Published:
Updated:
Prajavani

ಬೆಂಗಳೂರು: ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಾದ ಮೈಸೂರಿನ ಎಚ್‌.ಟಿ. ಇಂದಿರಮ್ಮ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಾಬಣ್ಣ ಕುಕನೂರು (ಜಮಾಲುದ್ದೀನ್‌) ಅವರನ್ನು ಮಾಲತಿಶ್ರೀ ರಂಗಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ₹ 10 ಸಾವಿರ ನಗದು, ಪ್ರಮಾಣ ಪತ್ರ, ಫಲಕಗಳನ್ನು ಒಳಗೊಂಡಿದೆ.

ಗೋಕಾಕ ಹಾಗೂ ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್‌ ನೀಡುವ ಈ ಪ್ರಶಸ್ತಿಯನ್ನು ಮಾರ್ಚ್‌ 7ರಂದು ಗೋಕಾಕದಲ್ಲಿ ಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಪ್ರದಾನ ಮಾಡುವರು ಎಂದು ಟ್ರಸ್ಟ್‌ನ ಸಂಯೋಜಕರಾದ ಅಶೋಕ ಪೂಜಾರಿ, ಮಹಂತೇಶ ಗಂಗಪಣ್ಣ ತಾಂವಶಿ ಹಾಗೂ ಗುಡಿಹಳ್ಳಿ ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃತ್ತಿ ರಂಗಭೂಮಿಯ ಹಿರಿಯ ನಟಿ ಮಾಲತಿಶ್ರೀ ಮೈಸೂರು ಅವರ ಆತ್ಮಕಥೆ 2005ರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !