ಗುರುವಾರ , ಜುಲೈ 16, 2020
24 °C

ಆನ್‌ಲೈನ್‌ ಮೂಲಕ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಆನ್‌ಲೈನ್‌ ಮೂಲಕ ಮಹದೇಶ್ವರ ಸ್ವಾಮಿಯ ದರ್ಶನ ಹಾಗೂ ವಿವಿಧ ಸೇವೆಗಳನ್ನು ಕಾಯ್ದಿರಿಸುವ ವ್ಯವಸ್ಥೆಗೆ ಬುಧವಾರದಿಂದ ಚಾಲನೆ ದೊರೆತಿದೆ. 

‘ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 5.30ರವರೆಗೆ ಮತ್ತು ಸಂಜೆ 6.45ರಿಂದ 8 ಗಂಟೆವರೆಗೆ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ www.mmhillstemple.com ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ. 

ಇದೇ ವೆಬ್‌ಸೈಟ್‌ ಮೂಲಕ ವಿವಿಧ ಸೇವೆಗಳನ್ನು ಕಾಯ್ದಿರಿಸಲು ಅವಕಾಶ ಇದೆ. ಪ್ರತಿ ಸೇವೆಗೂ ದರ ನಿಗದಿಪಡಿಸಲಾಗಿದೆ. 

ಪಂಚ ಕಳಸ ಸಮೇತ ನವರತ್ನ ಕಿರೀಟ ಧಾರಣೆ (ದರ: ₹600), ಏಕದಶವಾದ ರುದ್ರಾಭಿಷೇಕ ಸಮೇತ ನವರತ್ನ ಕಿರೀಟಧಾರಣೆ–2ನೇ ಪೂಜೆಗೆ ಮಾತ್ರ (₹750), ಏಕವಾರ ರುದ್ರಾಭಿಷೇಕ (₹300), ಶಿವ ಅಷ್ಟೋತ್ತರ ಬಿಲ್ವಾರ್ಚನೆ (₹300), ಪಂಚಾಮೃತ ಅಭಿಷೇಕ (₹300), ವಿದ್ಯುತ್‌ ದೀಪಾಲಂಕಾರ: 1 ಗಂಟೆಗೆ (₹1,200), ಅರ್ಧಗಂಟೆಗೆ (₹750), ಕಾಲು ಗಂಟೆಗೆ (₹500).

ಹುಲಿವಾಹನ, ಬಸವವಾಹನ ಮತ್ತು ಬೆಳ್ಳಿ ಕಿರೀಟೋತ್ಸವ (ರುದ್ರಾಕ್ಷಿ ಮಂಟಪ) ಉತ್ಸವ ಸೇವೆಗಳನ್ನು ಕಾಯ್ದಿರಿಸಲು ಅವಕಾಶವಿದ್ದು, ಈ ಉತ್ಸವಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದ ಒಳ ಆವರಣದಲ್ಲಿ ನಡೆಯಲಿದೆ. ಪ್ರತಿ ಉತ್ಸವಕ್ಕೂ ₹200 ದರ ನಿಗದಿಪಡಿಸಲಾಗಿದೆ. 

‘ಸೇವೆ ಹಾಗೂ ಉತ್ಸವಗಳನ್ನು ಮಾಡಿಸುವ ಭಕ್ತಾದಿಗಳಿಗೆ ಬಿಲ್ವಪತ್ರೆ, ವಿಭೂತಿ ಮತ್ತು ಒಣದ್ರಾಕ್ಷಿ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು’ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು