ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಮಲ್ಲಿಕಾ ಘಂಟಿ ಅಧಿಕಾರದ ಅವಧಿ ಮತ್ತೆ ವಿಸ್ತರಣೆ

Last Updated 11 ಫೆಬ್ರುವರಿ 2019, 14:40 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅಧಿಕಾರದ ಅವಧಿ ಮತ್ತೆ ವಿಸ್ತರಣೆಯಾಗಿದೆ.

‘ಫೆ. 9ರಿಂದ ಜಾರಿಗೆ ಬರುವಂತೆ ಕುಲಪತಿ ಘಂಟಿ ಅವರ ಅಧಿಕಾರದ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದಾರೆ. ಸೋಮವಾರ ಮಧ್ಯಾಹ್ನ ಆದೇಶ ಪ್ರತಿ ಕೈ ಸೇರಿದೆ’ ಎಂದು ಕುಲಸಚಿವ ಅಶೋಕಕುಮಾರ ರಂಜೇರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಇದರೊಂದಿಗೆ ಮೂರನೇ ಬಾರಿಗೆ ಘಂಟಿ ಅವರ ಅಧಿಕಾರದ ಅವಧಿ ವಿಸ್ತರಣೆಗೊಂಡಿದೆ.

2018ರ ಸೆ.8ರಂದು ಘಂಟಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ನಂತರ ರಾಜ್ಯಪಾಲರು ನಾಲ್ಕು ತಿಂಗಳವರೆಗೆ ವಿಸ್ತರಣೆ ಮಾಡಿದ್ದರು. ಆ ಅವಧಿ ಜ.7ರಂದು ಕೊನೆಗೊಂಡಿತ್ತು. ಮತ್ತೆ, ಜ.9ರಿಂದ ಅನ್ವಯವಾಗುವಂತೆ ಒಂದು ತಿಂಗಳ ಕಾಲ ಸೇವಾ ಅವಧಿ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದರು. ಅದು ಫೆ. 8ಕ್ಕೆ ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT