ಭಾನುವಾರ, ಆಗಸ್ಟ್ 18, 2019
26 °C

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

Published:
Updated:

ಕಲಬುರ್ಗಿ: ಭೀಮಾ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ ರೈತ ಬಸಣ್ಣ ದೊಡ್ಡಮನಿ (65) ಅವರ ಶವ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

ಆಕಳುಗಳ ಮೈ ತೊಳೆಯಲು ಭಾನುವಾರ ಬೆಳಿಗ್ಗೆ ನದಿ ತೀರಕ್ಕೆ ಹೋಗಿದ್ದ ಬಸಣ್ಣ ಮರಳಿ ಬಂದಿರಲಿಲ್ಲ. ನದಿ ದಂಡೆ ಮೇಲೆ ಅವರ ಟೊಪ್ಪಿಗೆ ಹಾಗೂ ಪಾದರಕ್ಷೆ ಮಾತ್ರ ಸಿಕ್ಕಿದ್ದವು. 

ಬಸಣ್ಣ ಅವರಿಗಾಗಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ರಾತ್ರಿಯಿಡೀ ನದಿ ದಂಡೆಯಲ್ಲೇ ಕಾದು ಕುಳಿತಿದ್ದರು. ಸೋಮವಾರ ಬೆಳಿಗ್ಗೆಯಿಂದ ಹೈದರಾಬಾದ್‌ನಿಂದ ಬಂದಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಹುಡುಕಾಟ ನಡೆಸಿ, ಗ್ರಾಮದಿಂದ ತುಸು ದೂರದಲ್ಲೇ ಶವ ಪತ್ತೆ ಮಾಡಿದರು.

Post Comments (+)