‘ಅಧಿಕಾರಿಗಳ ಮೇಲೆ ದಬ್ಬಾಳಿಕೆ’

ಮಂಗಳವಾರ, ಏಪ್ರಿಲ್ 23, 2019
27 °C

‘ಅಧಿಕಾರಿಗಳ ಮೇಲೆ ದಬ್ಬಾಳಿಕೆ’

Published:
Updated:
Prajavani

 ಶಿರಾ: ‘ಮಂಡ್ಯ ಲೋಕಸಭಾ ಚುನಾವಣೆ ಎದುರಿಸಲು ಶಕ್ತಿ ಇಲ್ಲದವರು ಅಧಿಕಾರ ಇಲ್ಲದೆಯೇ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಂತಹವರ ಆರೋಪಕ್ಕೆ ನಾನ್ಯಾಕೆ ಉತ್ತರ ಕೊಡಲಿ. ಚುನಾವಣಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಸೋಮವಾರ ಗುರುಗುಂಡ ಬ್ರಹ್ಮೇಶ್ವರಸ್ವಾಮಿಮಠದಲ್ಲಿ ಲೋಕಕಲ್ಯಾಣಾರ್ಥ ನಡೆದ ಹೋಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಚುನಾವಣಾ ಆಡಳಿತ ವ್ಯವಸ್ಥೆ, ಪ್ರಕ್ರಿಯೆ ಬಗ್ಗೆ ಆರೋಪ ಮಾಡಿದರೆ ನಾನ್ಯಾಕೆ ಉತ್ತರಿಸಬೇಕು? ಅದಕ್ಕೂ ನಮಗೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಂಬಂದಿಸಿದಂತೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕೆಗೆ ಪ್ರತಿಕ್ರಿಯಿಸಿ, ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಮ್ಮ ಅಭಿಮಾನಿಗಳು, ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿದರಲ್ಲ ಅವರ ಮನೆಯಲ್ಲಿ ನೋಟುಗಳಾಗಲಿ, ನೋಟಿನ ಯಂತ್ರವಾಗಲಿ ಸಿಗಲಿಲ್ಲ. ಈಶ್ವರಪ್ಪ ಮನೆಯಲ್ಲಿ ನೋಟಿನ ಯಂತ್ರ ಸಿಕ್ಕಿತ್ತು’ ಎಂದು ವ್ಯಂಗ್ಯವಾಡಿದರು.

‘ಯಾರು ಯೋಗ್ಯರು, ಅಯೋಗ್ಯರು ಎಂಬ ಸರ್ಟಿಫಿಕೆಟ್‌ ಅನ್ನು ಈಶ್ವರಪ್ಪ ಅಥವಾ ಬಿಜೆಪಿ ಮುಖಂಡರು ನನಗೆ ನೀಡುವ ಅಗತ್ಯ ಇಲ್ಲ. ನನಗೆ ಸರ್ಟಿಫಿಕೆಟ್ ನೀಡುವವರು ನಾಡಿನ ಜನ’ ಎಂದರು.

28 ಕ್ಷೇತ್ರದಲ್ಲಿ ಗೆಲುವಿನ ಗುರಿ: ‘ತುಮಕೂರು ಲೋಕಸಭಾ ಕ್ಷೇತ್ರ ಮಾತ್ರವಲ್ಲ. ನಾಡಿನ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಪಕ್ಷಗಳ ಅಭ್ಯರ್ಥಿಗಳು ಗೆಲ್ಲಬೇಕು ಎಂಬ ಗುರಿ ಇಟ್ಟುಕೊಂಡು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !