ಅಂಬರೀಷ್‌ ಕೈಬಿಟ್ಟ ಮೇಲೆ ಮಂಡ್ಯ ರಾಜಕೀಯ ಚಿತ್ರಣ ಬದಲು–‍ಪ್ರಸಾದ್‌

7

ಅಂಬರೀಷ್‌ ಕೈಬಿಟ್ಟ ಮೇಲೆ ಮಂಡ್ಯ ರಾಜಕೀಯ ಚಿತ್ರಣ ಬದಲು–‍ಪ್ರಸಾದ್‌

Published:
Updated:

ಮೈಸೂರು: ‘ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಮಂಡಲ ಪುನರ್‌ ರಚನೆ ವೇಳೆ ನನ್ನನ್ನು ಹಾಗೂ ಅಂಬರೀಷ್‌ ಅವರನ್ನು ಕೈಬಿಟ್ಟ ಪರಿಣಾಮ ಮೈಸೂರು, ಮಂಡ್ಯ ಜಿಲ್ಲೆಗಳ ರಾಜಕೀಯ ಚಿತ್ರಣವೇ ಬದಲಾಯಿತು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಇಲ್ಲಿ ಗುರುವಾರ ಹೇಳಿದರು.

‘ವಿಧಾನಸಭೆ ಚುನಾವಣೆ ವೇಳೆ ಅಂಬರೀಷ್‌ ಮನವೊಲಿಸಲು ಕಾಂಗ್ರೆಸ್‌ನ ಮಂತ್ರಿಮಂಡಲವೇ ಅವರ ಮನೆ ಬಾಗಿಲಿಗೆ ಹೋಗಿತ್ತು. ಆದರೂ  ಅವರು ಸ್ವಾಭಿಮಾನ ಬಿಟ್ಟುಕೊಡಲಿಲ್ಲ. ಹಿರಿಯ, ಅನುಭವಿ ರಾಜಕಾರಣಿಗಳಿಗೆ ಅಗೌರವ ತೋರಿದ ಪರಿಣಾಮ ಮೈಸೂರಿನಲ್ಲೂ ಇದೇ ಸ್ಥಿತಿ ನಿರ್ಮಾಣವಾಯಿತು’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ನಿರ್ಮಾಣದ ದರ್ಶನ್‌ ಅಭಿನಯದ ‘ಒಡೆಯ’ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬರೀಷ್‌ ಕೂಡ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !