ಮಂಡ್ಯ: ಕುಡಿವ ನೀರಿಗೆ ತತ್ವಾರ

ಭಾನುವಾರ, ಜೂಲೈ 21, 2019
27 °C

ಮಂಡ್ಯ: ಕುಡಿವ ನೀರಿಗೆ ತತ್ವಾರ

Published:
Updated:
Prajavani

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಾಗಿದೆ. ಮಳೆ ಇಲ್ಲದೇ ಬಿತ್ತನೆ ಪ್ರಮಾಣವೂ ಕುಂಠಿತಗೊಂಡಿದೆ.

ತಾಲ್ಲೂಕಿನಲ್ಲಿ ಒಟ್ಟು 405 ಗ್ರಾಮಗಳಿದ್ದು, 2.70 ಲಕ್ಷ ಜನಸಂಖ್ಯೆಯಿದೆ. 130ಕ್ಕೂ ಹೆಚ್ಚು ಕೆರೆಗಳಿವೆ. ಅವುಗಳ ಪೈಕಿ 90ಕ್ಕೂ ಹೆಚ್ಚು ಕೆರೆಗಳು ಬತ್ತಿವೆ. ಪಕ್ಕದಲ್ಲಿ ಹೇಮಾವತಿ ಜಲಾಶಯವಿದ್ದರೂ, ಮಳೆಯಾಗದೇ ನೀರಿನ ಕೊರತೆ ಉಂಟಾಗಿದೆ. ಗಂಗನಹಳ್ಳಿ, ಕೊಟಗಹಳ್ಳಿ, ನಾಗರಘಟ್ಟ, ಹಳೇ ನಂದಿಪುರ, ಯಗಚಗುಪ್ಪೆ, ಭೈರಾಪುರದಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ವಿತರಣೆ ಮಾಡಲಾಗುತ್ತಿದೆ. ಹೊಸಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಒಟ್ಟು 428 ಕೊಳವೆಬಾವಿಗಳಿದ್ದು, 112 ಕೆಟ್ಟು ಹೋಗಿವೆ. 682 ಕುಡಿಯುವ ನೀರಿನ ತೊಂಬೆಗಳಿದ್ದು, 210 ಹಾಳಾಗಿವೆ.

ಆಗದ ಬಿತ್ತನೆ: ಈ ವರ್ಷ ಒಟ್ಟು 40,689 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆಯಿಂದ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ರಾಗಿ 50 ಕ್ವಿಂಟಲ್ ದಾಸ್ತಾನು ಇದ್ದು, 6.2 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಮುಸುಕಿನ ಜೋಳ 100 ಕ್ವಿಂಟಲ್ ದಾಸ್ತಾನು ಇದ್ದು, 15.5 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಅಂದಹಾಗೆ ಇಲ್ಲಿನ ಶಾಸಕ ಜೆಡಿಎಸ್‌ನ ಕೆ.ಸಿ.ನಾರಾಯಣಗೌಡ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !