17ರಂದು ವಿವಿ ಕ್ಯಾಂಪಸ್‌ನಲ್ಲಿ ‘ಮಾ ಉತ್ಸವ’

7

17ರಂದು ವಿವಿ ಕ್ಯಾಂಪಸ್‌ನಲ್ಲಿ ‘ಮಾ ಉತ್ಸವ’

Published:
Updated:

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘಟನೆ ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ (ಮಾ) ವತಿಯಿಂದ ಇದೇ 17ರಂದು ಕೊಣಾಜೆಯ ಕ್ಯಾಂಪಸ್‌ನಲ್ಲಿ ‘ಮಾ ಉತ್ಸವ’ ನಡೆಯಲಿದೆ.

‘26 ವಿಭಾಗಗಳಿಂದ 1 ಸಾವಿರಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿವಿಧ ಆಟ, ವಿನೋದಾವಳಿ ಮೂಲಕ ಕ್ಯಾಂಪಸ್‌ನ ನೆನಪುಗಳನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಲಾಗುವುದು’ ಎಂದು ‘ಮಾ’ ಅಧ್ಯಕ್ಷ ದಿನೇಶ್‌ ಕುಮಾರ್‌ ಆಳ್ವ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದು ಎರಡನೇ ಉತ್ಸವ, ಎರಡು ವರ್ಷದ ಹಿಂದೆ ‘ಮಾ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಗೆ ಕೊಡುಗೆ ನೀಡಲು ಆಸಕ್ತಿ ಇರುವವರಿಗೆ ಅವಕಾಶ ದೊರಕಲಿದೆ’ ಎಂದು ‘ಮಾ’ ಉಪಾಧ್ಯಕ್ಷ ಪ್ರೊ.ಪಿ.ಎಲ್‌. ಧರ್ಮ ಹೇಳಿದರು.

ಮಾಹಿತಿಗೆ 9448843395 (ಡಾ.ಪಿ.ಎಲ್‌.ಧರ್ಮ), ಇ–ಮೇಲ್‌ venu@addidea.co.in ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !