ನೀರಿನಲ್ಲಿ ಮುಳುಗಿ ಸಾವು: ದೃಢಪಡಿಸಿದ ಮರಣೋತ್ತರ ವರದಿ

7

ನೀರಿನಲ್ಲಿ ಮುಳುಗಿ ಸಾವು: ದೃಢಪಡಿಸಿದ ಮರಣೋತ್ತರ ವರದಿ

Published:
Updated:

ಶಿವಮೊಗ್ಗ: ಇಲ್ಲಿನ ಆರ್‌ಎಂಎಲ್‌ ನಗರದಲ್ಲಿ ಸೋಮವಾರ ಮ್ಯಾನ್‌ಹೋಲ್‌ಗೆ ಇಳಿದಿದ್ದ ಕಾರ್ಮಿಕರ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

ಮೊದಲು ಇಳಿದಿದ್ದ ಅಂಜನಪ್ಪ ಫೈಬರ್ ಹಿಡಿಕೆಯಂತಹ ಮೆಟ್ಟಿಲ ಮೇಲೆ ಕಾಲು ಇಟ್ಟ ತಕ್ಷಣ ಅದು ಮುರಿದಿದೆ. 20 ಅಡಿ ಆಳದ ನೀರಿಗೆ ಬೀಳುವಾಗ ತಲೆಗೆ, ಬೆನ್ನಿಗೆ ಪೆಟ್ಟುಬಿದ್ದಿದೆ. ಮುಚ್ಚಿದ್ದ ಮ್ಯಾನ್‌ಹೋಲ್ ಒಳಗೆ ಆಮ್ಲಜನಕದ ಕೊರೆತೆ ಇದ್ದ ಕಾರಣ ಬೇಗನೆ ಸಾವು ಸಂಭವಿಸಿದೆ. ವೆಂಕಟೇಶ ಅವರ ಸಾವೂ ಇದೇ ರೀತಿ ಆಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಂಜನಪ್ಪ ಬೀಳುತ್ತಿದ್ದಂತೆ ಜತೆಯಲ್ಲಿದ್ದ ವೆಂಕಟೇಶ ಗಾಬರಿಯಿಂದ ನೀರಿಗೆ ಇಳಿದಿದ್ದಾನೆ. ಮದ್ಯಪಾನ ಮಾಡಿದ್ದ ಕಾರಣ ರಕ್ಷಣೆಗೆ ಹಿಡಿದುಕೊಂಡಿದ್ದ ಹಗ್ಗವನ್ನೂ ಬಿಟ್ಟಿದ್ದಾರೆ. ಇದರಿಂದ ಇಬ್ಬರೂ ಪರಸ್ಪರ ಹಿಡಿದುಕೊಂಡು ಕೆಲಸ ನಿಮಿಷ ಮೇಲೆ ಬರಲು ಪ್ರಯತ್ನಿಸಿದ್ದಾರೆ. ಆದರೆ, ಯಶ ಕಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

23 ಲಕ್ಷ ಪರಿಹಾರ:  ಮೃತರ ಕುಟುಂಬಗಳಿಗೆ ನಗರ ಪಾಲಿಕೆ ತಲಾ ₨ 10 ಲಕ್ಷ, ಸಮಾಜ ಕಲ್ಯಾಣ ಇಲಾಖೆ ₨ 9 ಲಕ್ಷ (ಈಗ ತಲಾ ₨ 4.5 ಲಕ್ಷ, ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಉಳಿದ ಹಣ) ಪರಿಹಾರ ನೀಡಿವೆ.

ಕಾರ್ಮಿಕರ ಕಾರ್ಡ್‌ ಹೊಂದಿದ್ದ ವೆಂಕಟೇಶ ಅವರಿಗೆ ಕಾರ್ಮಿಕ ಇಲಾಖೆಯಿಂದ ₨ 5 ಲಕ್ಷ ಪರಿಹಾರ ದೊರಕಲಿದೆ. ಅಂಜನಪ್ಪ ಅವರಿಗೆ ಇನ್ನೂ 18 ವರ್ಷ ತುಂಬಿರದ ಕಾರಣ ಅವರು ಕಾರ್ಡ್‌ ಹೊಂದಿಲ್ಲ. ಹಾಗಾಗಿ, ಅವರಿಗೆ ಇಲಾಖೆಯ ಪರಿಹಾರ ಸಿಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಪಾಲಿಕೆ ಮೇಯರ್ ನಾಗರಾಜ ಕಂಕಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್‌ ಗೋಪಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳ ತಂಡ ಮಂಗಳವಾರ ಶವಾಗಾರದ ಬಳಿಗೆ ತೆರಳಿ ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್‌ ವಿತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !