ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ್ ಮ್ಯಾರಥಾನ್‌: ಕೀನ್ಯಾ ಸ್ಪರ್ಧಿಗಳು ಮೇಲುಗೈ

Last Updated 17 ಫೆಬ್ರುವರಿ 2019, 19:20 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ಮಣಿಪಾಲದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಕೀನ್ಯಾ ಸ್ಪರ್ಧಿಗಳು ಮೇಲುಗೈ ಸಾಧಿಸಿದರು.

21 ಕಿ.ಮೀ. ಪುರುಷರ ಓಪನ್‌ ವಿಭಾಗದಲ್ಲಿ ಕೀನ್ಯಾದ ಇಬ್ರಾಹಿಂ (1ಗಂಟೆ 8ನಿಮಿಷ, 58 ಸೆಕೆಂಡ್) ಪ್ರಥಮ ಸ್ಥಾನ ಪಡೆದರೆ, ಪರಸಪ್ಪ (1ಗ 9 ನಿ 1ಸೆ) ದ್ವಿತೀಯ ಸ್ಥಾನ ಪಡೆದರು. ಕೀನ್ಯಾದ ಐಸಾಕ್‌ (1 ಗ 10 ನಿ 34 ಸೆ) ತೃತೀಯ ಸ್ಥಾನ ಪಡೆದರು.

21 ಕಿ.ಮೀ, ಮಹಿಳೆಯರ ಓಪನ್ ವಿಭಾಗದಲ್ಲಿ ಅರ್ಚನಾ (1ಗ 27ನಿ 28ಸೆ) ಮೊದಲಿಗರಾಗಿ ಗುರಿ ಮುಟ್ಟಿದರೆ, ಶಾಲಿನಿ ದ್ವಿತೀಯ (1ಗಂ, 36ನಿ, 6ಸೆ) ಪ್ರಿಯಾಂಕ (1ಗಂ, 40ನಿ, 41ಸೆ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಾಲ್ಕು ವಿಭಾಗಗಳಲ್ಲಿ ನಡೆದಮ್ಯಾರಥಾನ್‌ನಲ್ಲಿ 10,000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಜರ್ಮನಿ, ನೈರೋಬಿ, ಶ್ರೀಲಂಕಾ, ಇಥಿಯೋಪಿಯ ಸೇರಿದಂತೆ ಹಲವು ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಜುಂಬಾ ನೃತ್ಯ, ಯೋಗ ಗುರು ಮದನ್ ಕಟಾರಿಯಾ ಅವರ ಲಾಫ್ಟರ್ ಯೋಗ ಗಮನ ಸೆಳೆಯಿತು. ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ್ದ ನೌಕಾಪಡೆ ಕಮಾಂಡರ್ ಅಭಿಲಾಷ್‌ ಟಾಮಿ, ಶಾಸಕ ರಘುಪತಿ ಭಟ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಾಹೆ ಸಹ ಕುಲಪತಿ ಡಾ.ಎಚ್‌.ಎಸ್‌.ಬಲ್ಲಾಳ್‌, ಮಾಹೆ ಸಹ ಕುಲಪತಿ ಡಾ.ಎಚ್‌.ವಿನೋದ್ ಭಟ್ ಉಪಸ್ಥಿತರಿದ್ದರು.

ಫಲಿತಾಂಶ

21 ಕಿ.ಮೀ ಮಾಹೆ ಪುರುಷರ ವಿಭಾಗ: ಬಿನು ಪೀಟರ್‌ (1ಗಂ.19ನಿ 5 ಸೆ), ಮಹಾ ಕೋಟೇಶ್ವರ್‌ (1.19.38), ಸುದೀಪ್‌ (1.26.28).‌

21 ಕಿ.ಮೀ ಮಾಹೆ ಮಹಿಳೆಯರ ವಿಭಾಗ: ಐನೀಸ್‌ (1.19.10), ಕ್ರಿಸ್ಟಿನಾ (1.24.53) ಚಿತ್ರಾಲಿ ಖನ್ನ (1.54.55).

10 ಕಿ.ಮೀ ಮಾಹೆ ಮಹಿಳೆಯರ ವಿಭಾಗ: ಪ್ರಿಯಾ (46.42) ನೇಹಾ (55.240 ಎಮ್ಮಾ (58.20).

10 ಕಿ.ಮೀ ಪುರುಷರ ಮುಕ್ತ ವಿಭಾಗ: ಇಮಾನ್ಯುಯಲ್‌ (32.14) ಪ್ರಶಾಂತ್, (32:31) ಮಿಕಿಯಾಸ್‌.

10 ಕಿ.ಮೀ ಮಾಹೆ ಪುರುಷರ ವಿಭಾಗ: ಸಂದೀಪ್‌ (32.32) ಸಾಜನ್ ಕುರಿಯಾಕೋಸ್‌ (38:38), ದೆಬೋರ್ಶಿ (45.27)

5 ಕಿ.ಮೀ ಪುರುಷರ ಮುಕ್ತ ವಿಭಾಗ: ಬಸವರಾಜ್‌ ಜಿ.ಎಸ್‌. (15.31) ನೀಲಪ್ಪ (15.38), ಚಂದನ್‌ (15:50)

5 ಕಿ.ಮೀ ಮಹಿಳೆಯರ ಮುಕ್ತ ವಿಭಾಗ: ಪ್ರಿಯಾ (18.14), ಸುಮಾ (18.39) ದೀಕ್ಷಾ (19.46).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT