ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ಮೂಲವೃಂದಾವನಕ್ಕೆ ಗಂಧಲೇಪನ ಆನ್‌ಲೈನ್‌ ದರ್ಶನ

Last Updated 26 ಏಪ್ರಿಲ್ 2020, 13:11 IST
ಅಕ್ಷರ ಗಾತ್ರ

ರಾಯಚೂರು: ಅಕ್ಷಯ ತೃತೀಯ ದಿನದಂದು ಮಂತ್ರಾಲಯದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ವೃಂದಾವನಕ್ಕೆ ಗಂಧಲೇಪನ ಸಂಪ್ರದಾಯವನ್ನು ಭಾನುವಾರ ನೆರವೇರಿಸಿದರು.

ಭಕ್ತರು ಆನ್‌ಲೈನ್‌ ಮೂಲಕವೇ ದರ್ಶನ ಪಡೆದುಕೊಳ್ಳಲು ಲೈವ್‌ ವ್ಯವಸ್ಥೆ ಮಾಡಲಾಗಿತ್ತು. ಭಕ್ತರನ್ನು ಉದ್ದೇಶಿಸಿ ಸಂದೇಶ ನೀಡಿದ ಅವರು, ‘ಅಕ್ಷಯ ತೃತೀಯ ದಿನವು ಶುಭದಿನವಾಗಿದೆ. ಇದೇ ದಿನದಂದು ಪರಶುರಾಮ ಜಯಂತಿ, ಪೂರ್ವ ಪೀಠಾಧಿಪತಿ ವಿದ್ಯಾಧಿರಾಜ ತೀರ್ಥರ ಆರಾಧನಾ ಮಹೋತ್ಸವ, ವಿಜಯಧ್ವಜ ತೀರ್ಥರ ಆರಾಧನಾ ಮಹೋತ್ಸವವಿದೆ’ ಎಂದರು.

‘ಈ ದಿನದಂದು ಮಂತ್ರಾಲಯ ಮಠದಲ್ಲಿರುವ ಎಲ್ಲಾಯತಿವರಣ್ಯೇರ ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಗಂಧಲೇಪನ ಮಾಡಲಾಗಿದೆ. ಅದೇ ರೀತಿ ಪ್ರಪಂಚದ ಮೂಲೆಮೂಲೆಯಲ್ಲಿರುವ ಎಲ್ಲಾ ಮೂಲವೃಂದಾವನಕ್ಕೆ ಗಂಧಲೇಪನ ಮಾಡುವ ಸಂಪ್ರದಾಯ ನೆರವೇರಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕುಪ್ರಕೃತಿ ವಿಕೋಪದಿಂದ ಸಂಭವಿಸಿದ್ದು ಭಕ್ತರು ಬೇಸರ ಪಟ್ಟುಕೊಳ್ಳಬಾರದು. ಎಲ್ಲರೂ ಶೀಘ್ರವಾಗಿ ಈ ಭಯದಿಂದ ಮುಕ್ತರಾಗಿ ಸಹಜ ಜೀವನ ಬರುವಂತಾಗಲಿ ಹಾಗೂ ಜ್ಞಾನ, ಭಕ್ತಿ, ವೈರಾಗ್ಯ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.ಗಂಧಲೇಪನ ನಿಮಿತ್ತ ಗುರುಸ್ತೋತ್ರ ಪಾರಾಯಣ, ವಿಶೇಷ ಮಂತ್ರಗಳ, ಸ್ತೋತ್ರಗಳ ಪಾರಾಯಣ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT