ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣ ರೈಲ್ವೆಯ ಹಲವು ರೈಲು ಸಂಚಾರ ರದ್ದು

ಮುಂಬೈ ಸಮೀಪ ಹಳಿಯ ಮೇಲೆ ಬಿದ್ದ ಬಂಡೆಗಲ್ಲು
Last Updated 4 ಆಗಸ್ಟ್ 2019, 16:17 IST
ಅಕ್ಷರ ಗಾತ್ರ

ಕಾರವಾರ: ಮಹಾರಾಷ್ಟ್ರದಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದಕೇಂದ್ರ ರೈಲ್ವೆ ವಲಯದ ಮುಂಬೈ ವಿಭಾಗದ ಗೀತೆ ಆಪ್ತಾ ಪ್ರದೇಶದ ವಿವಿಧೆಡೆಹಳಿಗಳು ಜಲಾವೃತವಾಗಿವೆ. ಬೆಟ್ಟ ಪ್ರದೇಶದಲ್ಲಿ ಬಂಡೆಗಳೂ ಹಳಿಗಳ ಮೇಲೆ ಉರುಳಿವೆ. ಹಾಗಾಗಿ ಕೊಂಕಣ ರೈಲ್ವೆ ನಿಗಮವುಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ.ಕೆಲವು ರೈಲುಗಳ ಸಂಚಾರವನ್ನು ಮೊಟಕುಗೊಳಿಸಿದೆ.

ರದ್ದಾದ ರೈಲುಗಳು:ಕುರ್ಲಾ– ಮಂಗಳೂರು ನಡುವಿನ ಭಾನುವಾರದ (ಆ.4) ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ (12619), ಮಂಗಳೂರು ಜಂಕ್ಷನ್– ಸಿಎಸ್‌ಎಂಟಿ (12134), ಸಿಎಸ್‌ಎಂಟಿ– ಮಂಗಳೂರು ಜಂಕ್ಷನ್ (12133), ಎರ್ನಾಕುಲಂ– ಕುರ್ಲಾ ನಡುವಿನ ‘ಪೂರ್ಣಾ ಎಕ್ಸ್‌ಪ್ರೆಸ್’ (22150), ಕುರ್ಲಾ– ತಿರುವನಂತಪುರಂ ನಡುವಿನ ‘ನೇತ್ರಾವತಿ ಎಕ್ಸ್‌ಪ್ರೆಸ್’ (16345) ರೈಲುಗಳ ಸಂಚಾರ ರದ್ದಾಗಿದೆ.

ಸಿಎಸ್‌ಎಂಟಿಯತ್ತ ಹೊರಟಿದ್ದ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್‌’(12620) ಅನ್ನು ಕುಂದಾಪುರದಲ್ಲಿ ನಿಲ್ಲಿಸಲಾಗಿದೆ. ಅಂತೆಯೇ, ‘ನೇತ್ರಾವತಿ ಎಕ್ಸ್‌ಪ್ರೆಸ್’ (16346) ಸಂಚಾರವನ್ನು ಶೊರ್ನೂರಿಗೇ ಮೊಟಕುಗೊಳಿಸಲಾಗಿದೆ. ಕೊಚುವೇಲಿ– ಕುರ್ಲಾ ನಡುವಿನ ‘ಗರೀಬ್ ರಥ್ ಎಕ್ಸ್‌ಪ್ರೆಸ್’ (12202) ಕಣ್ಣೂರಿನವರೆಗೆ ಮಾತ್ರ ಬಂದಿದೆ.

ಸೋಮವಾರ ಸಂಚರಿಸಬೇಕಿದ್ದ ಕೊಚುವೇಲಿ– ಕುರ್ಲಾ ನಡುವಿನ ರೈಲನ್ನೂ ರದ್ದು ಮಾಡಲಾಗಿದೆ.ಸಂಚಾರ ರದ್ದಾದ ರೈಲಿನ ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ಮೊತ್ತವನ್ನು ಪಾವತಿಸಲಾಗುತ್ತದೆಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT