ಮಾರ್ಕಂಡೇಯ ಅವಧಾನಿ ನಿಧನ

ಶುಕ್ರವಾರ, ಮಾರ್ಚ್ 22, 2019
28 °C

ಮಾರ್ಕಂಡೇಯ ಅವಧಾನಿ ನಿಧನ

Published:
Updated:
Prajavani

ಶಿವಮೊಗ್ಗ: ಗಮಕಿ ಮತ್ತೂರಿನ ಮಾರ್ಕಂಡೇಯ ಅವಧಾನಿಗಳು (86) ಬುಧವಾರ ತಡರಾತ್ರಿ ನಿಧನರಾದರು.

ಗಮಕ ಕಲೆ ಎಲ್ಲೆಡೆ ಪಸರಿಸಲು ಹಾಗೂ ಸಂಸ್ಕೃತ ಗ್ರಾಮ ಮತ್ತೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಲ್ಲಿ ಅವರ ಕೂಡುಗೆ ಅಪಾರ. 

ಹೆಸರಾಂತ ವಾಗ್ಮಿಗಳಾಗಿದ್ದ ಅವರು ಸರಳತೆ, ಸಜ್ಜನಿಕೆಯ ಸ್ವಭಾವದವರಾಗಿದ್ದರು.

ಧರ್ಮ, ಶಾಸ್ತ್ರಗಳಲ್ಲಿ ನಿಖರವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ಸಂಸ್ಕೃತ, ವೇದ, ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. 1997ರಲ್ಲಿ ಶಿವಮೊಗ್ಗದಲ್ಲಿ ನಡೆದ 4ನೇ ಅಖಿಲ ಕರ್ನಾಟಕ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆಗ ಅವರಿಗೆ ‘ಗಮಕ ರತ್ನಾಕರ’ ಬಿರುದು ನೀಡಿ ಗೌರವಿಸಲಾಗಿತ್ತು.

ದೇಶದ ಪ್ರತಿಷ್ಠಿತ ಮಠಗಳು ಅವರನ್ನು ಸನ್ಮಾನಿಸಿವೆ. ಕರ್ನಾಟಕ ಸರ್ಕಾರ 2012ರಲ್ಲಿ ಆರಂಭಿಸಿದ್ದ ‘ಕುಮಾರ ವ್ಯಾಸ’ ಪ್ರಶಸ್ತಿಗೆ ಭಾಜನರಾದ ಮೊದಲ ಗಮಕಿ ಅವರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ‘ಕಲಾಶ್ರೀ ಪ್ರಶಸ್ತಿ’ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾನರಾಗಿದ್ದರು.

ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಹೋಮಗಳಿಗೆ, ದೊಡ್ಡ ಅನುಷ್ಠಾನಗಳಿಗೆ ಪ್ರಧಾನ ಪೌರೋಹಿತ್ಯವನ್ನು ಅವರು ವಹಿಸುತ್ತಿದ್ದರು.

ಮಾರ್ಕಂಡೇಯ ಅವಧಾನಿಗಳಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.‌ ಗುರುವಾರ ಮಧ್ಯಾಹ್ನ ಮತ್ತೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !