ಪರಿಹಾರ ಕೇಂದ್ರದಲ್ಲಿ ಸಂತ್ರಸ್ತೆ ಯುವತಿ ಮದುವೆ

7

ಪರಿಹಾರ ಕೇಂದ್ರದಲ್ಲಿ ಸಂತ್ರಸ್ತೆ ಯುವತಿ ಮದುವೆ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಯುವತಿಯ ವಿವಾಹ ಬುಧವಾರ ನಗರದ ಓಂಕಾರೇಶ್ವರ ದೇಗುಲದಲ್ಲಿ ಸರಳವಾಗಿ ನಡೆಯಿತು.

ಸೋಮವಾರಪೇಟೆ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಪಿ.ಟಿ. ಸಂಜೀವ್‌ ಹಾಗೂ ಸುಮಿತ್ರಾ ಅವರ ಪುತ್ರಿ ರಂಜಿತಾ ಅವರ ವಿವಾಹವು ಕೇರಳದ ಕಣ್ಣೂರಿನ ಮಧುಸೂದನ್‌ ಹಾಗೂ ತಂಗಮಣಿ ದಂಪತಿ ಪುತ್ರ ರಂಜಿತ್‌ ಅವರೊಂದಿಗೆ ನೆರವೇರಿತು.

ಮನೆ ಕಳೆದುಕೊಂಡಿದ್ದ ರಂಜಿತಾ ಕುಟುಂಬಸ್ಥರು ಮದುವೆ ಮುಂದೂಡುವ ಪ್ರಯತ್ನದಲ್ಲಿದ್ದರು. ಆದರೆ, ಸೇವಾ ಭಾರತಿ, ಲಯನ್ಸ್‌ ಕ್ಲಬ್‌ ಸಹಕಾರದಿಂದ ನಿಗದಿತ ಮುಹೂರ್ತದಲ್ಲೇ ಮದುವೆ ನೆರವೇರಿತು. ಬಳಿಕ ನಗರದ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ ಆರತಕ್ಷತೆಯಲ್ಲಿ ಗಣ್ಯರು ಶುಭಕೋರಿದರು.

‘ಮದುವೆಯ ಖರ್ಚಿಗೆ ಅಗತ್ಯವಿರುವ ಹಣಕಾಸಿನ ನೆರವನ್ನೂ ಸಂಘ– ಸಂಸ್ಥೆಗಳು ಒದಗಿಸಿವೆ. ಮದುವೆಯನ್ನೂ ವ್ಯವಸ್ಥಿತವಾಗಿ ಮಾಡಿಕೊಟ್ಟಿದ್ದಾರೆ’ ಎಂದು ರಂಜಿತಾ ಹೇಳಿದರು.

‘ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದ ಯುವತಿಗೆ ಭವಿಷ್ಯಕ್ಕೆ ನೆರವಾದ ತೃಪ್ತಿ ನಮ್ಮದು. ಇಬ್ಬರೂ ಉತ್ತಮ ಜೀವನ ನಡೆಸಬೇಕೆಂಬುದು ನಮ್ಮ ಹಾರೈಕೆ’ ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ.ಕೆ. ದಾಮೋಧರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !