ಶುಕ್ರವಾರ, ಡಿಸೆಂಬರ್ 13, 2019
26 °C

ಅಪರಿಚಿತ ಫೋನ್ ಕರೆಗೆ ಮುರಿದ ಮದುವೆ, ಬೇರೆ ಯುವಕನೊಂದಿಗೆ ಸಪ್ತಪದಿ ತುಳಿದ ವಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: 6 ತಿಂಗಳ ಹಿಂದೆಯೇ ನಿಶ್ಚಿತಾರ್ಥ ನಡೆದಿದ್ದ ಜೋಡಿಯಿಂದು ಸಪ್ತಪದಿ ತುಳಿಯಲು ಸಿದ್ಧರಾಗಿದ್ದರು. ಆದರೆ ಅನಾಮಧೇಯ ಫೋನ್ ಕರೆಯಿಂದಾಗಿ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಶುಕ್ರವಾರ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ.

ಮದುವೆ ಮುರಿದುಬಿದ್ದ ನಂತರ ಅದೇ ಗ್ರಾಮದ ಯುವಕನೊಬ್ಬ ಯುವತಿಯನ್ನು ಮದುವೆಯಾಗುವುದಾಗಿ ಮುಂದೆ ಬಂದಿದ್ದಕ್ಕೆ ಅದೇ ಮುಹೂರ್ತದಲ್ಲಿ ಯುವತಿಗೆ ಯುವಕನ ಜತೆ ಮದುವೆ ನೆರವೇರಿದೆ.

ಚನ್ನಪಟ್ಟಣದ ಎಲೆಕೇರಿ ಬಡಾವಣೆಯ ವಧು ಜತೆ ಎಲಿಯೂರು ಗ್ರಾಮದ ಬಸವರಾಜುಗೆ ಮದುವೆ ನಿಶ್ಚಯವಾಗಿತ್ತು. ಆದರೆ ಗುರುವಾರ ಹೆಣ್ಣಿನ ಮನೆಯವರಿಗೆ ಅಪರಿಚಿತನೊಬ್ಬ ಕರೆ ಮಾಡಿ, ವರನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ನಿನ್ನೆ ರಾತ್ರಿಯೆಲ್ಲ ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿದೆ.

ಆರೋಪ ಸಾಬೀತಿಗೆ ವರ ಬಸವರಾಜ್ ಪಟ್ಟು ಹಿಡಿದಿದ್ದರು. ಆದಾಗ್ಯೂ ಮದುವೆ ಮುರಿದುಬಿದ್ದಿದೆ. ಈ ಕುರಿತು ವರ ಬಸವರಾಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಫೋನ್ ಕರೆ ಮಾಡಿದವರ ಪತ್ತೆಗೆ ಆಗ್ರಹಿಸಿದ್ದಾರೆ.

ಮದುವೆ ಮುರಿದು ಬಿದ್ದ ಯುವತಿಯನ್ನು ಮದುವೆ ಆಗುವುದಾಗಿ ಎಲೆಕೇರಿ ನಿವಾಸಿ ಆನಂದ್ ಒಪ್ಪಿಕೊಂಡಿದ್ದಾರೆ. ಇದಕ್ಕೆ ಎರಡು ಕುಟುಂಬದ ಹಿರಿಯರು ಒಪ್ಪಿ ಆನಂದ್ ಜತೆ ಯುವತಿಯ ಮದುವೆ ನೆರವೇರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು