ಬುಧವಾರ, ನವೆಂಬರ್ 20, 2019
20 °C

ಶಾಸಕ ಪ್ರತಾಪಗೌಡ ರಾಜೀನಾಮೆ ಸಾಧ್ಯತೆ

Published:
Updated:
Prajavani

ರಾಯಚೂರು: ‘ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಬುಧವಾರ ರಾಜೀನಾಮೆ ಕೊಡುವುದು ನಿಶ್ಚಿತ’ ಎಂದು ಆಪ್ತ ಮೂಲಗಳು ತಿಳಿಸಿವೆ.

‘ಬಿಜೆಪಿ ಬೆಂಬಲಿಸುವ ಶಾಸಕರನ್ನು ಬೆಂಗಳೂರಿನಲ್ಲಿ ಒಂದು ಕಡೆ ಇರಿಸಲಾಗಿದೆ’ ಎನ್ನುವುದು ಈ ಮೂಲಗಳ ವಿವರಣೆ.

‘ರಾಜೀನಾಮೆ ನೀಡುವ ಪರಿಸ್ಥಿತಿ ಏನಿಲ್ಲ. ಅಮಾವಾಸ್ಯೆ ಇರುವುದರಿಂದ ದೇವಸ್ಥಾನಕ್ಕೆ ಬಂದಿದ್ದೇನೆ. ಬುಧವಾರ ಮಸ್ಕಿಗೆ ಬರುತ್ತೇನೆ’ ಎಂದು ಪ್ರತಾಪಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ಆದರೆ ತಾವಿರುವ ಸ್ಥಳದ ಮಾಹಿತಿ ನೀಡುವುದಕ್ಕೆ ಅವರು ತಡವರಿಸಿದರು.

ಪ್ರತಿಕ್ರಿಯಿಸಿ (+)