ಅಂತರ್ಜಾತಿ ವಿವಾಹವಾದ ಕುಂ.ವೀ. ಪುತ್ರ

ಬುಧವಾರ, ಜೂನ್ 26, 2019
28 °C

ಅಂತರ್ಜಾತಿ ವಿವಾಹವಾದ ಕುಂ.ವೀ. ಪುತ್ರ

Published:
Updated:
Prajavani

ಚಿತ್ರದುರ್ಗ: ಸಾಹಿತಿ ಕುಂ.ವೀರಭದ್ರಪ್ಪ ಅವರ ಪುತ್ರ ಪ್ರವರ ಹಾಗೂ ಅಂಬಿಕಾ ಅಂತರ್ಜಾತಿ ವಿವಾಹ ಇಲ್ಲಿನ ಮುರುಘಾ ಮಠದಲ್ಲಿ ಬುಧವಾರ ನೆರವೇರಿತು.

29ನೇ ವರ್ಷದ 6ನೇ ತಿಂಗಳ ಸಾಮೂಹಿಕ ವಿವಾಹದಲ್ಲಿ 45 ಜೋಡಿಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸರಳತೆಯನ್ನು ಸಾರಿದರು.

ಹೊಸದುರ್ಗದ ಎಸ್‌.ನಿಜಲಿಂಗಪ್ಪ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರವರ ಹಾಗೂ ಅಂಬಿಕಾ ವಚನ ಮಾಂಗಲ್ಯವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು.

‘ಬಸವತತ್ವದ ಆಧಾರದ ಮೇಲೆ ವಿವಾಹವಾಗಬೇಕು ಎಂಬ ಇಚ್ಛೆ ಮನಸ್ಸಿನಲ್ಲಿತ್ತು. ಪ್ರಜ್ಞಾಪೂರ್ವಕವಾಗಿ ಸರಳ ವಿವಾಹವಾಗಿದ್ದೇವೆ. ಶಿಕ್ಷಣ ಹಾಗೂ ತಂದೆಯೇ ಇದಕ್ಕೆ ಪ್ರೇರಣೆ. ಪರಿಸರ ದಿನದಂದೇ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಖುಷಿಯನ್ನು ಹೆಚ್ಚಿಸಿದೆ’ ಎಂದು ಸಂತಸ ಹಂಚಿಕೊಂಡರು ಪ್ರವರ.

‘ಯಾರನ್ನೋ ಮೆಚ್ಚಿಸಲಿಕ್ಕೆ ಇಂತಹ ವಿವಾಹ ಮಾಡಿಕೊಂಡಿಲ್ಲ. ಇಬ್ಬರು ಚರ್ಚಿಸಿ, ಪರಸ್ಪರ ಒಪ್ಪಿ ಸರಳ ವಿವಾಹವಾಗಿದ್ದೇವೆ. ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದು ಸಂಭ್ರಮ ಹೆಚ್ಚಿಸಿದೆ’ ಎಂದು ಅಭಿಪ್ರಾಯ ಹಂಚಿಕೊಂಡರು ಅಂಬಿಕಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !