ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ಅವಕಾಶ

ಶನಿವಾರ, ಜೂಲೈ 20, 2019
25 °C

ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ಅವಕಾಶ

Published:
Updated:
Prajavani

ಕಲಬುರ್ಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಸೂರ್ಯನಂದಿ ಕ್ಷೇತ್ರದಲ್ಲಿರುವ ಮಾತೆ ಮಾಣಿಕೇಶ್ವರಿ ಅವರ ದರ್ಶನ ಪಡೆಯಲು ಭಕ್ತರಿಗೆ ಪ್ರತಿ ಭಾನುವಾರ ಅವಕಾಶ ಕಲ್ಪಿಸಲಾಗಿದೆ.‘ಮಾತಾಜಿಯವರು ಕ್ಷೇತ್ರದಲ್ಲಿ ಎರಡು ದಶಕಗಳಿಂದ ಕೋಟಿಲಿಂಗ ಪ್ರತಿಷ್ಠಾಪನೆ ಮಾಡಲು ಚಾಲನೆ ನೀಡಿದ್ದು, ಎಲ್ಲಾ ಭಕ್ತರು ತಮ್ಮ ಭಕ್ತಿಗನುಗುಣವಾಗಿ ಲಿಂಗ ಪ್ರತಿಷ್ಠಾಪ‍ನೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಪ್ರಗತಿಯಲ್ಲಿದೆ. ಆದ್ದರಿಂದ ಪ್ರತಿ ಭಾನುವಾರ ಭಕ್ತರು ಮಾತಾಜಿ ಅವರ ದರ್ಶನ ಪಡೆದು ಕೋಟಿಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು’ ಎಂದು ಟ್ರಸ್ಟ್‌ ಸದಸ್ಯ ಸಿದ್ರಾಮಪ್ಪ ಸಣ್ಣೂರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !