ಮಿ–ಟೂ ಅಭಿಯಾನ: ಗಂಡಸರಲ್ಲಿ ನಡುಕ‌ ಶುರುವಾಗಿದೆ

7

ಮಿ–ಟೂ ಅಭಿಯಾನ: ಗಂಡಸರಲ್ಲಿ ನಡುಕ‌ ಶುರುವಾಗಿದೆ

Published:
Updated:

ಹುಬ್ಬಳ್ಳಿ: ಮಿ–ಟೂ ಅಭಿಯಾನ ಆರಂಭವಾದ ಬಳಿಕ ಗಂಡಸರಲ್ಲಿ ನಡುಕ ಶುರುವಾಗಿದೆ ಎಂದು‌‌ ನಟಿ ಶ್ರುತಿ ಹರಿಹರನ್ ಹೇಳಿದರು.

ಇಲ್ಲಿ ಆಭರಣ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದ್ರು ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಮುಂದುವರೆಯುತ್ತದೆ ಎಂದರು.

ಇದರಲ್ಲಿ ದೊಡ್ದವರ ಹೆಸರು ಬಹಿರಂಗೊಳುತ್ತಿದೆ. ಈ ಅಭಿಯಾನ ‌ಗೇಮ್ ಚೇಂಜರ್ ಆಗಲಿದೆ. ಯಾವಾಗ ಹೇಳಿದರು ಸತ್ಯ ಸತ್ಯವೇ. ಒಬ್ಬ‌ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು‌ ಕಷ್ಟ. ಇದು‌ ಮಾಧ್ಯಮದಲ್ಲಿ ‌ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗಂತೂ ಶಿಕ್ಷೆಯಾಗುತ್ತದೆ ಎಂದರು.

ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂಥ ಕೃತ್ಯ ನಡೆಯುತ್ತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಫೈಯರ್ ಸಮಿತಿ ರಚನೆ ಮಾಡುತ್ತಿದ್ದು, ಪ್ರಿಯಾಂಕಾ ಉಪೇಂದ್ರ, ಅಹಿಂಸಾ ಚೇತನ್, ಕವಿತಾ ಲೋಕೇಶ್ ಇದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !