ಮ್ಯುಟೇಷನ್‌ನಿಂದ ವಂಶವಾಹಿ ಕಾಯಿಲೆ ಅಧಿಕ

ಸೋಮವಾರ, ಏಪ್ರಿಲ್ 22, 2019
31 °C
ಜೀನ್ ಪರೀಕ್ಷೆಯಿಂದ ಕಾರಣ ಬೇಗನೆ ಪತ್ತೆ lಪ್ರತಿ 20 ಸಾವಿರ ಮಂದಿ ಪೈಕಿ ಒಬ್ಬರಿಗೆ ಕಾಡುವ ರೋಗ

ಮ್ಯುಟೇಷನ್‌ನಿಂದ ವಂಶವಾಹಿ ಕಾಯಿಲೆ ಅಧಿಕ

Published:
Updated:
Prajavani

ಬೆಂಗಳೂರು: ಮಾನವನ ಜೀನ್‌ಗಳಲ್ಲಿ ಸಂಭವಿಸುವ ‘ಮ್ಯುಟೇಷನ್‌’ನಿಂದ ವಿರಳ ಕಾಯಿಲೆಗಳು ಇತ್ತೀಚಿನ ದಿನ
ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕೆಲವು ವರ್ಷಗಳ ಹಿಂದೆ ವಂಶವಾಹಿ ಕಾಯಿಲೆಗಳಿಗೆ ಕಾರಣ
ಗಳನ್ನು ಪತ್ತೆ ಹಚ್ಚುವುದು ಸುಲಭವಿರಲಿಲ್ಲ.

ಆದರೆ, ಈಗ ವಿರಳ ಕಾಯಿಲೆಗಳಿಗೆ ಕಾರಣಗಳನ್ನು ತ್ವರಿತವಾಗಿ ಪತ್ತೆ ಮಾಡುವ ತಂತ್ರಜ್ಞಾನ ಬೆಂಗಳೂರಿನಲ್ಲಿ ಲಭ್ಯವಿದೆ.

ಈ ಕುರಿತು ‘ಮೆಡ್‌ಜಿ ನೋಮ್‌’ ಪ್ರಯೋಗಾಲಯದ ಸಂಶೋಧಕಿ ಹಾಗೂ ವೈದ್ಯೆ ಡಾ.ಪ್ರಿಯಾ ಕದಂ ‘ಪ್ರಜಾವಾಣಿ’ ಜತೆ ಮಾತನಾಡಿ, ವಂಶವಾಹಿ ಪರೀಕ್ಷೆಯ ಬಗ್ಗೆ ವೈದ್ಯರಲ್ಲಿ ಅರಿವಿನ ಕೊರತೆ ಇದೆ. ಬಹಳಷ್ಟು ಕಾಯಿಲೆ ವಂಶವಾಹಿ ಸಂಬಂಧಿತವಾಗಿರುತ್ತವೆ. ವಂಶವಾಹಿ ಪರೀಕ್ಷೆ ಮತ್ತು ಅದರ ವರದಿಯನ್ನು ಕೆಲವೇ ವಾರಗಳಲ್ಲಿ ಪಡೆಯಬಹುದು. ಹಿಂದೆ ಅದಕ್ಕೆ 2ರಿಂದ 3 ವರ್ಷಗಳು ಬೇಕಾಗುತ್ತಿತ್ತು ಎಂದರು. 

ವಿರಳ ಕಾಯಿಲೆಗಳು ಎಂದರೆ ಪ್ರತಿ 20 ಸಾವಿರ ಜನರ ಪೈಕಿ ಒಬ್ಬರಿಗೆ ಕಾಡುವ ಅಪರೂಪದ ಕಾಯಿಲೆ. ಭಾರತದಲ್ಲಿ ಜನಸಂಖ್ಯೆ 130 ಕೋಟಿ ಇರುವುದರಿಂದ ಈಗ ವಿರಳ ಕಾಯಿಲೆ ಎನಿಸುವುದಿಲ್ಲ. ವಂಶವಾಹಿ ಕಾರಣದಿಂದ ಶೇ 3.5ರಷ್ಟು ಮಕ್ಕಳಲ್ಲಿ ಜನ್ಮಜಾತ ವಿಕೃತಿ, ಶೇ 3 ರಿಂದ 5ರಷ್ಟು ಮಕ್ಕಳಲ್ಲಿ ಹೃದ್ರೋಗ, ಶೇ 20 ರಿಂದ 30ರಷ್ಟು ಶಿಶು ಮರಣ ಸಂಭವಿಸುತ್ತಿದೆ. ಜನಿಸಿದ ಒಂದು ತಿಂಗಳ ಬಳಿಕ ಮಕ್ಕಳ ಸಾವಿಗೂ ಜೀನ್‌ಗಳಲ್ಲಿ ಆಗುವ ಮ್ಯುಟೇಷನ್‌ ಕೂಡ ಕಾರಣ. ಈ ಪ್ರಮಾಣ ಶೇ 30 ರಿಂದ 50 ರಷ್ಟಿದೆ ಎಂದು ಪ್ರಿಯಾ ಕದಂ ತಿಳಿಸಿದರು.

ಕ್ಯಾನ್ಸರ್‌ನಲ್ಲಿ ಶೇ 50 ರಷ್ಟು ಪ್ರಕರಣಗಳು ವಂಶವಾಹಿಯೇ ಕಾರಣವಾಗಿರುತ್ತದೆ. ಅಧಿಕ ರಕ್ತದೊತ್ತಡಕ್ಕೂ ವಂಶವಾಹಿಗೂ ಸಂಬಂಧವಿದೆ. ಇದಲ್ಲದೆ ವಿರಳ ಕಾಯಿಲೆಗಳಾದ ಕುಸುಮ ರೋಗ, ಥಲಸೀಮಿಯಾ, ಸಿಕಲ್‌ ಸೆಲ್‌ ಅನಿಮಿಯಾ, ಮಸ್ಕ್ಯೂಲಾರ್‌ ಡಿಸ್ಟ್ರೋಫಿ, ಲೈಸೋಸೊಮಲ್‌ ಸ್ಟೋರೇಜ್‌ ತೊಂದರೆಗಳು ಮುಂತಾದವುಗಳಿಗೆ ಕಾರಣಗಳನ್ನು ವಂಶವಾಹಿ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು ಎಂದರು.

ಜೀನ್‌ ರಚನೆಯಲ್ಲಾಗುವ ಹಠಾತ್‌ ಮಾರ್ಪಾಡನ್ನು ಮ್ಯುಟೇಷನ್‌ ಎನ್ನಲಾಗುತ್ತದೆ. ಸ್ವಯಂ ಮಾರ್ಪಾಡಿಗೆ ಹಲವು ಕಾರಣಗಳಿರುತ್ತವೆ. ಈ ಮಾರ್ಪಾಡು ವಂಶವಾಹಿಯ ಮೂಲಕ ಮುಂದಿನ ಪೀಳಿಗೆಗೂ ವರ್ಗಾವಣೆ ಆಗುತ್ತದೆ. ಇದರಿಂದ ಉಂಟಾಗುವ ಕಾಯಿಲೆಯನ್ನು ವಂಶವಾಹಿ ಪರೀಕ್ಷೆಯಿಂದಲೇ ಪತ್ತೆ ಮಾಡಲು ಸಾಧ್ಯ ಎನ್ನುತ್ತಾರೆ ಕದಂ.

ವೈದ್ಯರಲ್ಲಿ ಅರಿವಿನ ಕೊರತೆ

ಕೆಲವು ಬಗೆಯ ಕಾಯಿಲೆಗಳಿಗೆ ವಂಶವಾಹಿ ಪರೀಕ್ಷೆ ನಡೆಸಿದಾಗ ನೈಜ ಕಾರಣವನ್ನು ತಿಳಿಯಲು ಸಾಧ್ಯ. ಆದರೆ, ವಂಶವಾಹಿ ಪರೀಕ್ಷೆಯ ವೈದ್ಯರಲ್ಲಿಯೇ  ಬಗ್ಗೆ ಅರಿವಿನ ಕೊರತೆ ಇದೆ ಎನ್ನುತ್ತಾರೆ ಪ್ರಿಯಾ ಕದಂ.

ನಾಲ್ಕೈದು ವರ್ಷಗಳ ಹಿಂದೆ ಇಂತಹ ಪರೀಕ್ಷೆ ವ್ಯವಸ್ಥೆ ಬೆಂಗಳೂರಿನಲ್ಲಿ ಇರಲಿಲ್ಲ. ಈಗ ಯಾವುದೇ ಕಾಯಿಲೆಗೆ ವಂಶವಾಹಿ ಪರೀಕ್ಷೆ ಅಗತ್ಯ ವಿದ್ದರೆ, ವೈದ್ಯರು ಬರೆದುಕೊಡಬಹುದು. ವೈದ್ಯರಲ್ಲಿ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !