ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಭವನಕ್ಕೂ ಮಾಧ್ಯಮ ನಿರ್ಬಂಧ

ಶಾಸಕರ ಖಾಸಗಿತನಕ್ಕೆ ಅಡ್ಡಿಯಾಗುವ ನೆಪ
Last Updated 21 ಫೆಬ್ರುವರಿ 2020, 21:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಕಾರ್ಯ ಕಲಾಪದ ಚಿತ್ರೀಕರಣ ಮಾಡದಂತೆಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ತಡೆಯೊಡ್ಡಿರುವ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ಈಗ ಶಾಸಕರ ಭವನಕ್ಕೂ ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

ಮಾಧ್ಯಮದವರು ಶಾಸಕರ ಭವನಕ್ಕೆ ಹೋದರೆ ಶಾಸಕರ ಖಾಸಗಿತನಕ್ಕೆ ಅಡ್ಡಿಯಾಗಲಿದೆ ಎಂದು ನಿರ್ಬಂಧಕ್ಕೆ ಕಾರಣ ನೀಡಿದ್ದಾರೆ. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು, ಕ್ಯಾಮರಾ ಮೆನ್‌ಗಳಿಗೆ ಪ್ರವೇಶ ನೀಡದಂತೆ ಅವರು ಆದೇಶಿಸಿದ್ದಾರೆ.

‘ಶಾಸಕರು ತಮ್ಮ ಮತ ಕ್ಷೇತ್ರದಿಂದ ಬೆಂಗಳೂರಿಗೆ ಆಗಮಿಸಿ, ಇಲ್ಲಿ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ಶಾಸಕರ ಭವನದ ಕೊಠಡಿಗಳಲ್ಲಿ ತಂಗುವ ವೇಳೆಯು ಅವರ ಖಾಸಗಿ ಸಮಯವಾಗಿರುತ್ತದೆ. ಆ ಸಮಯದಲ್ಲಿ ಮಾಧ್ಯಮದವರು ಭೇಟಿಯಾಗಲು ಬಂದರೆ ಅವರ ಖಾಸಗಿತನಕ್ಕೆ ಅಡಚಣೆಉಂಟಾಗುತ್ತದೆ. ಒಂದು ವೇಳೆ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಬೇಕಿದ್ದರೆ ಶಾಸಕರ ಭವನದ ಗೇಟಿನ ಹೊರಗೆ ಬಂದು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಕಾಗೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT