ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ ಕುರಿತ ಮಾಹಿತಿ ವಿನಿಮಯಕ್ಕೆ ಕರ್ನಾಟಕ–ಕೇರಳ ಒಪ್ಪಿಗೆ

ಆರೋಗ್ಯ ಸಚಿವೆ ಶೈಲಜಾ ಜತೆ ಸುಧಾಕರ್ ವಿಡಿಯೊ ಸಂವಾದ
Last Updated 11 ಮೇ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ –19 ನಿಯಂತ್ರಣಕ್ಕಾಗಿ ಉತ್ತಮ ಪದ್ಧತಿಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅಳವಡಿಸಿಕೊಳ್ಳುವ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಜತೆ ಮಾತುಕತೆ ನಡೆಸಿದರು.

ಸೋಮವಾರ ವಿಡಿಯೊ ಸಂವಾದದ ಮೂಲಕ ಇಬ್ಬರೂ ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಎರಡೂ ರಾಜ್ಯಗಳಲ್ಲಿ ರೋಗದ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಅಳವಡಿಸಿಕೊಂಡಿರುವ ಕ್ರಮಗಳು. ಅದರಿಂದ ಬಂದ ಫಲಿತಾಂಶಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಲಾಕ್‌ಡೌನ್‌ ಸಡಿಲಿಸಿದ ಬಳಿಕ ಎದುರಾಗುವ ಸವಾಲುಗಳನ್ನು ಎದುರಿಸಲು ಅನುಸರಿಸಬೇಕಾದ ಕ್ರಮಗಳು ಕುರಿತೂ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಬ್ಬರೂ ಒಪ್ಪಿಗೆ ಸೂಚಿಸಿದರು.

ಕೇರಳ ಪಿಎಚ್‌ಸಿ ಮತ್ತು ತಾಲ್ಲೂಕು ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಜಾಲ ಹೊಂದಿರುವುದರಿಂದ ಕೊರೊನಾ ಸೋಂಕಿತರನ್ನು ಮುಂಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಯಿತು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸೋಂಕಿತರನ್ನು ಪ್ರತ್ಯೇಕಿಸಿ ಕಟ್ಟುನಿಟ್ಟಾಗಿ ಅವರ ಮೇಲೆ ನಿಗಾ ಇರಿಸಿದ್ದರಿಂದ ಮರಣ ಪ್ರಮಾಣ ತಡೆಯಲು ಸಾಧ್ಯವಾಯಿತು ಎಂದು ಶೈಲಜಾ ವಿವರಿಸಿದರು.

ಮುಂಬರುವ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಬರಲು ಆರಂಭಿಸಿದ ಬಳಿಕ ಸವಾಲುಗಳು ಎದುರಾಗುತ್ತವೆ. ಈ ಹಂತದಲ್ಲಿ ಕರ್ನಾಟಕದಂತಹ ಉತ್ತಮ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರಾಜ್ಯದ ಸಲಹೆ, ಸಹಕಾರದ ಅಗತ್ಯವಿದೆ ಎಂದೂ ಶೈಲಜಾ ಹೇಳಿದರು.

ಕರ್ನಾಟಕ ಅಳವಡಿಸಿಕೊಂಡಿರುವ ತಂತ್ರಜ್ಞಾನ ಮತ್ತು ತಜ್ಞರ ಆಧಾರಿತ ಚಿಕಿತ್ಸಾ ಕ್ರಮ, ಆರಂಭದಲ್ಲಿ ಎರಡಷ್ಟಿದ್ದ ಲ್ಯಾಬ್‌ಗಳ ಸಂಖ್ಯೆ ಇದೀಗ 35 ಕ್ಕೆ ಏರಿಕೆಯಾಗಿರುವ ಮತ್ತು ಪ್ರತಿ ದಿನ 5,000 ಪರೀಕ್ಷೆ ಮಾಡುತ್ತಿರುವ ಬಗ್ಗೆ ಸುಧಾಕರ್‌ ಅವರಿಂದ ಮಾಹಿತಿ ಪಡೆದ ಶೈಲಜಾ ಅವರು ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT