ವೈದ್ಯ ಶಿಕ್ಷಣ ಶುಲ್ಕ ಬಿಕ್ಕಟ್ಟು ಕಗ್ಗಂಟು : ಶೇ 30ರಷ್ಟು ಹೆಚ್ಚಿಸಲು ಪಟ್ಟು

7
ಶೇ 30ರಷ್ಟು ಹೆಚ್ಚಿಸಲು ಪಟ್ಟು

ವೈದ್ಯ ಶಿಕ್ಷಣ ಶುಲ್ಕ ಬಿಕ್ಕಟ್ಟು ಕಗ್ಗಂಟು : ಶೇ 30ರಷ್ಟು ಹೆಚ್ಚಿಸಲು ಪಟ್ಟು

Published:
Updated:

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ನಡುವಿನ ಮಾತುಕತೆ ಮುರಿದು ಬಿದ್ದಿದ್ದು, ಬಿಕ್ಕಟ್ಟು ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಖಾಸಗಿ ಕಾಲೇಜುಗಳ ಸಂಘಟನೆಗಳ ಪದಾಧಿಕಾರಿಗಳ ಜತೆಗೆ ಶುಕ್ರವಾರ ಸಭೆ ನಡೆಯಿತು. ‘ಶೇ 30ರಷ್ಟು ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಡೀಮ್ಡ್‌ ವಿಶ್ವವಿದ್ಯಾಲಯಗಳಷ್ಟೇ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಬೇಕು’ ಎಂದು ಖಾಸಗಿ ಕಾಲೇಜುಗಳ ಪ್ರತಿನಿಧಿಗಳು ಪಟ್ಟು ಹಿಡಿದರು. ‘ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಬಹುದು ಎಂದು ಯಮೂರ್ತಿ
ಡಿ.ವಿ. ಶೈಲೇಂದ್ರ ಕುಮಾರ್ ಸಮಿತಿ ಶಿಫಾರಸು ಮಾಡಿದೆ. ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ಇಲಾಖೆಯು ಖಾಸಗಿ ಕಾಲೇಜು
ಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅಷ್ಟು ಹೆಚ್ಚಳ ಮಾಡಬಹುದು’ ಎಂದು ಶಿವಕುಮಾರ್‌ ಭರವಸೆ ನೀಡಿದರು. ಅದಕ್ಕೆ ಪದಾಧಿಕಾರಿಗಳು ಒಪ್ಪಲಿಲ್ಲ.

‘ಆಡಳಿತ ಮಂಡಳಿಗಳ ಜತೆಗೆ ನಾಲ್ಕು ಸುತ್ತಿನ ಸಭೆ ನಡೆಸಲಾಗಿದೆ. ಯಶಸ್ವಿಯಾಗಿಲ್ಲ. ನಮಗೆ ಹೆಚ್ಚು ಕಾಲಾವಕಾಶ ಇಲ್ಲ. ಶನಿವಾರ ಬೆಳಿಗ್ಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಶಿವಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ಅಥವಾ ಕಡಿಮೆ ಶುಲ್ಕ ವಿಧಿಸಲು ಒಪ್ಪಿವೆ. ಆದರೆ, ಬೇರೆ ರಾಜ್ಯದ ವಿದ್ಯಾರ್ಥಿಗಳಿಂದ ವರ್ಷಕ್ಕೆ ₹14 ಲಕ್ಷ ಪಡೆಯಲು ಅನುಮತಿ ನೀಡಬೇಕೆಂದೂ ಕೋರಿವೆ’ ಎಂದು ಸಚಿವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !