ವೈದ್ಯಕೀಯ ವಿಭಾಗ: ಕೌನ್ಸೆಲಿಂಗ್‌

7
ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯ ಹುದ್ದೆಗಳ ಭರ್ತಿಗೆ ಹೊಸ ಕ್ರಮ

ವೈದ್ಯಕೀಯ ವಿಭಾಗ: ಕೌನ್ಸೆಲಿಂಗ್‌

Published:
Updated:

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಭರ್ತಿಗಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಕೌನ್ಸೆಲಿಂಗ್‌ ನಡೆಸಲು ಆರೋಗ್ಯ ಇಲಾಖೆ ಚಿಂತನೆ ನಡೆದಿದೆ.

ಹಿರಿಯ ಸ್ಥಾನಿಕ ವೈದ್ಯ, ತಜ್ಞರು ಹಾಗೂ ವೈದ್ಯಕೀಯ ಅಧಿಕಾರಿಗಳ ಹುದ್ದೆಗಾಗಿ ಈಗಷ್ಟೇ ಎಂಬಿಬಿಎಸ್‌ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಕೌನ್ಸೆಲಿಂಗ್‌ ನಡೆಸಲು ಉದ್ದೇಶಿಸಲಾಗಿದೆ.

‘ಸ್ನಾತಕೋತ್ತರ ಪದವಿ ಮುಗಿಸಿರುವ 380 ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದಾರೆ. ಆದರೆ, ಗ್ರಾಮೀಣ ಸೇವೆ ಕಡ್ಡಾಯ ನಿಯಮದಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಿಂದ ಹಿಂದೆಸರಿದಿದ್ದಾರೆ. ಇದಕ್ಕಾಗಿ ಡಿಪ್ಲೊಮಾ (ಡಿಪ್ಲೊಮಾ ಆಫ್‌ ನ್ಯಾಷನಲ್‌ ಬೋರ್ಡ್‌) ಪದವಿ ಪಡೆದ ವಿದ್ಯಾರ್ಥಿಗಳಿಗೂ ಅವಕಾಶ ಸಿಗಲಿದೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸರ್ಕಾರಿ ‌ವೈದ್ಯಕೀಯ ಸೀಟು ಪಡೆಯುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆ ಒಪ್ಪಂದಕ್ಕೆ ಸಹಿ ಮಾಡಿರುತ್ತಾರೆ. ಈ ಒಪ್ಪಂದದ ಪ್ರಕಾರ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ವರ್ಷ ಕರ್ತವ್ಯ ನಿರ್ವಹಿಸಬೇಕು ಅಥವಾ ದಂಡ ಪಾವತಿಸಬೇಕು. ಆದರೆ ಹೆಚ್ಚಿನವರು ದಂಡ ಕಟ್ಟುವ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !