ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ: ಬೀದಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ ಸಚಿವರು

7

ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ: ಬೀದಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ ಸಚಿವರು

Published:
Updated:

ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಯಶವಂತಪುರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಬೀದಿ ವ್ಯಾಪಾರಿಗಳ ಬಳಿ ಮೀಟರ್‌ ಬಡ್ಡಿಯ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ಆಲಿಸಿದರು.

ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮೊಬೈಲ್‌ ಆಧಾರಿತ ಯೋಜನೆಯೊಂದನ್ನು ಜಾರಿ ತರಲು ಚಿಂತನೆ ನಡೆಸಿದೆ. ಅದರ ಪ್ರಾಯೋಗಿಕ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೃಷಿ ಉತ್ಪನ್ನ ಅಧಿಕಾರಿಗಳು ಜೊತೆ ಇದ್ದರು.

‘ಸಮ್ಮಿಶ್ರ ಸರ್ಕಾರದಿಂದ ‘ಬಡವರ ಬಂಧು' ಯೋಜನೆಗೆ ಭರ್ಜರಿ ಸಿದ್ದತೆ ನಡೆಸಿದ್ದೆವೆ.‌‌‌ ಯೋಜನೆಗೆ ರೂಪುರೇಷೆಗಳನ್ನು ಈಗಾಗಲೇ ರೂಪಿಸಲಾಗುತ್ತಿದೆ. ಬಡವರಿಗೆ ಇದು ಅನುಕೂಲವಾಗುವಂತೆ ಮಾಡುತ್ತಿದ್ದೇವೆ’ ಎಂದು ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದರು.

ಈ ಯೋಜನೆಯಲ್ಲಿ ಬೀದಿ‌ ಬದಿಯ ವ್ಯಾಪಾರಿಗಳ ಒಂದು‌ ದಿನಕ್ಕೆ ವ್ಯಾಪಾರಕ್ಕೆ ಬೇಕಾಗುವ ಹಣವನ್ನು ಬೆಳಿಗ್ಗೆ ನೀಡಿ ಮತ್ತೆ ರಾತ್ರಿ ವಾಪಾಸು ಪಡೆಲಾಗುತ್ತದೆ ಇದರಿಂದ ಖಾಸಗಿಯವರ ನೀಡುವ ಅತಿ ಹೆಚ್ಚು ಬಡ್ಡಿ ಸಾಲಕ್ಕೆ ಕಡಿವಾಣ ಹಾ‌ಕಲಾಗುತ್ತದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವ್ಯಾಪಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ, ವ್ಯಾಪಾರಿಗಳೊಂದಿಗೆ ಮಾತನಾಡಿದರು.

ಇನ್ನಷ್ಟು ಓದಿ:  ಮೀಟರ್ ಬಡ್ಡಿಗೆ ಕಡಿವಾಣ: ಮುಖ್ಯಮಂತ್ರಿ ಭರವಸೆ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !