ಶುಕ್ರವಾರ, ಡಿಸೆಂಬರ್ 6, 2019
26 °C
ತಮಿಳುನಾಡು ಅರ್ಜಿ ವಿಚಾರಣೆ

ಮೇಕೆದಾಟು: 4 ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಿ– ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೇಕೆದಾಟು ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ‌ ವಿರೋಧಿಸಿದ ತಮಿಳುನಾಡಿನ ಅರ್ಜಿ ವಿಚಾರಣೆ ನಡೆಸಿ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠದಿಂದ ತಮಿಳುನಾಡು ಅರ್ಜಿ ವಿಚಾರಣೆ ನಡೆದಿದೆ. ನ್ಯಾಯಂಗ ನಿಂಧನೆ ಅರ್ಜಿ ಬಗ್ಗೆ ಸದ್ಯ ಯಾವುದೇ ವಿಚಾರಣೆಯನ್ನು ಪೀಠ ನಡೆಸಿಲ್ಲ.

ಮೇಕೆದಾಟು ಯೋಜನೆ ಕುರಿತು ಅವಸರ ತೋರುವ‌‌ ಅಗತ್ಯವಿಲ್ಲ. ಕೇವಲ ಪರಿಷ್ಕೃತ ವಿಸ್ತೃತ ‌ಯೋಜನಾ ವರದಿಯನ್ನು ಮಾತ್ರ ಆಯೋಗ ಕೇಳಿದೆ. ಪ್ರಾಥಮಿಕ ವರದಿಗೆ ಸಮ್ಮತಿ ನೀಡಿರುವುದು ಅಂತಿಮವಲ್ಲ ಎಂದ ನ್ಯಾಯಪೀಠ ಹೇಳಿದೆ.

ಕರ್ನಾಟಕ ಆಯೋಗಕ್ಕೆ ಅಂತಿಮ ವರದಿ ಸಲ್ಲಿಸಿದ ಬಳಿಕ ತಕರಾರು ಇದ್ದಲ್ಲಿ ಸಲ್ಲಿಸಲು ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಮೇಕೆದಾಟು‌ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಹಾನಿ ಇಲ್ಲ ಎಂದು ‌ಕರ್ನಾಟಕದ‌ ವಕೀಲರು ಪೀಠಕ್ಕೆ ತಿಳಿಸಿದರು. ನಾಲ್ಕು ವಾರಗಳ ನಂತರ ‌ವಿಚಾರಣೆ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು