ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಮದ್ಯಕ್ಕೆ ಗಂಡಸರ ಸಾಲು, ಪಕ್ಕದಲ್ಲೆ ದಿನಸಿಗೆ ಮಹಿಳೆಯರ ಸಾಲು

Last Updated 4 ಮೇ 2020, 5:26 IST
ಅಕ್ಷರ ಗಾತ್ರ

ಬಾಗಲಕೋಟೆ: ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಮದ್ಯದಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜಿಲ್ಲೆಯ ನವನಗರದಲ್ಲಿ ಸೋಮವಾರ ಮುಂಜಾನೆ ಎಂಎಸ್‌ಐಎಲ್‌ ಮಳಿಗೆ ಬಾಗಿಲು ತೆರೆಯುವ ಮುನ್ನವೇ ಮದ್ಯಪ್ರಿಯರು ಸಾಲುಗಟ್ಟಿದ್ದರು. ಅದರ ಪಕ್ಕದಲ್ಲೇ ಮಹಿಳೆಯರು ದಿನಸಿಗಾಗಿ ಸಾಲು ನಿಂತಿದ್ದ ವಿಚಿತ್ರ ಸನ್ನಿವೇಶ ಗೋಚರಿಸಿತು.

36 ಎಂಎಸ್ ಐಎಲ್ ಮಳಿಗೆಗಳು ಸೇರಿದಂತೆ ಜಿಲ್ಲೆಯಾದ್ಯಂತ 136 ಮದ್ಯದಂಗಡಿಗಳು ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯ ಖರೀದಿಗಾಗಿ ಸರದಿಯಲ್ಲಿ ನಿಂತಿದ್ದರು.

ಇನ್ನೊಂದೆಡೆ ನವನಗರದ ಸೆಕ್ಟರ್ ನಂ 4ರ ಎಂಎಸ್‌ಐಎಲ್ ಮಳಿಗೆಯ ಪಕ್ಕದ ರಸ್ತೆಯಲ್ಲಿ ನ್ಯಾಯಬೆಲೆ ಅಂಗಡಿ ಇದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೊಡುತ್ತಿರುವ ಎರಡು ತಿಂಗಳ ಪಡಿತರ ಧಾನ್ಯ ಪಡೆಯಲು ಸೋಮವಾರ ಬೆಳಿಗ್ಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT