‘ಮುಖ್ಯ ಕಾರ್ಯದರ್ಶಿಗೆ ಆಸಕ್ತಿ ಇಲ್ಲ’

7
ಬಿಎಂಆರ್‌ಸಿಎಲ್ ನೌಕರರ ಸಂಘದಿಂದ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಕೆ

‘ಮುಖ್ಯ ಕಾರ್ಯದರ್ಶಿಗೆ ಆಸಕ್ತಿ ಇಲ್ಲ’

Published:
Updated:

ಬೆಂಗಳೂರು: ‘ತ್ರಿಪಕ್ಷೀಯ ಮಾತುಕತೆ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಯಾವುದೇ ಆಸಕ್ತಿ ತೋರಿಲ್ಲ’ ಎಂದು ದೂರಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ನಿಗಮದ ನೌಕರರ ಸಂಘ ಹೈಕೋರ್ಟ್‌ಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದೆ.

ಬಿಎಂಆರ್‌ಸಿಎಲ್ ನೌಕರರ ಸಂಘ ಕರೆ ನೀಡಿದ್ದ ಮುಷ್ಕರ ಆಕ್ಷೇಪಿಸಿ ಮೆಟ್ರೊ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನೌಕರರ ಸಂಘದ ಪರ ವಕೀಲೆ ಲೀಲಾ ಕೃಷ್ಣನ್, ‘ಮೆಟ್ರೊ ನೌಕರರ ಸಂಘವು ಸಭೆಯಲ್ಲಿ, ಮುಷ್ಕರದ ನಿರ್ಧಾರ ಹಿಂಪಡೆಯುವ ಭರವಸೆ ನೀಡಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ನಿಗಮದ (ಬಿಎಂಆರ್‌ಸಿಎಲ್‌) ಪರ ವಕೀಲ ಸಂತೋಷ್ ನಾರಾಯಣ್ ವಾದ ಮಂಡಿಸಿ, ‘ಬಿಎಂಆರ್‌ಸಿಎಲ್ ನೌಕರರ ಕೆಲ ಆರ್ಥಿಕ ಬೇಡಿಕೆಗಳನ್ನು ಪೂರೈಸಲು ಮಧ್ಯಂತರ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ನೌಕರರು ಕಾರ್ಯ ನಿರ್ವಹಿಸುವ ವೇಳೆ ಮತ್ತು ನಿರ್ವಹಣೆ (ಆಪರೇಷನ್ ಆಂಡ್ ಮೇಂಟೆನೆನ್ಸ್) ವಿಭಾಗದ ಸಿಬ್ಬಂದಿಗೆ ರಾತ್ರಿ ಪಾಳಿಯ ಭತ್ಯೆ, ಲೋಕೊ ಪೈಲೆಟ್‌ಗಳಿಗೆ ಹಾರ್ಡ್ ಡ್ಯೂಟಿ ಭತ್ಯೆ, ವಾಷಿಂಗ್, ಸಾರಿಗೆ ಭತ್ಯೆ ನೀಡಲು ನಿಗಮ ನಿರ್ಧರಿಸಲಾಗಿದೆ. ಈ ಕುರಿತು ಜೂನ್ 22ರಂದು ಆದೇಶಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಖ್ಯ ಕಾರ್ಯದರ್ಶಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಬಿಎಂಆರ್‌ಸಿಎಲ್ ಪರ ವಕೀಲರು ಕಾಲಾವಕಾಶ ಕೋರಿದ ಕಾರಣ ನ್ಯಾಯಪೀಠವು, ಅರ್ಜಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !