ಭಾನುವಾರ, ಆಗಸ್ಟ್ 25, 2019
21 °C

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ

Published:
Updated:

ಬೆಂಗಳೂರು: ನಗರದಲ್ಲಿ ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಮಂತ್ರಿ ಸ್ಕ್ವೇರ್ ಸುರಂಗದಿಂದ ಹೊರ ಬರುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದಾಗಿ ಗಾಜಿನ ಪರದೆ ಜಖಂಗೊಂಡಿದೆ.

ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಎಸೆದಿದ್ದು ಭಾನುವಾರ ಮುಂಜಾನೆ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ರೈಲು ನಿಲ್ಲಿಸಿ ಬ್ಯಾಗ್‌ಗಳನ್ನು ತೆರವು ಮಾಡಿದ ನಂತರ ಓಡಾಟ ಆರಂಭಿಸಲಾಯಿತು

ಕಿಡಿಗೇಡಿಗಳ ಕೃತ್ಯದಿಂದ ಕಂಗೆಟ್ಟಿರುವ ಮೆಟ್ರೋ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Post Comments (+)