ಮೆಟ್ರೋ ಸಂಪೂರ್ಣ ಲೈನ್‌ ಪರಿಶೀಲಿಸಲು ಸೂಚನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

7

ಮೆಟ್ರೋ ಸಂಪೂರ್ಣ ಲೈನ್‌ ಪರಿಶೀಲಿಸಲು ಸೂಚನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

Published:
Updated:

ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಲು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ಅವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಮೂಲಕ ಸಂಚರಿಸಿದರು.

ಬಳಿಕ ಟ್ರಿನಿಟಿ‌ ಸರ್ಕ‌ಲ್‌ಗೆ ಆಗಮಿಸಿದ ಅವರು, ಬಿರುಕು ಬಿಟ್ಟಿರುವ ಪಿಲ್ಲರ್‌ ಅನ್ನು ವೀಕ್ಷಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ದೆಹಲಿಯಿಂದ ತಜ್ಞರು ಹಾಗೂ ನಮ್ಮ‌ ತಾಂತ್ರಿಕ ತಂಡವು ಈಗಾಗಲೇ ಪರಿಶೀಲಿಸಿ, ರಿಪೇರಿ ಕೆಲಸ ಪ್ರಾರಂಭಿಸಿದೆ.

ಪಿಲ್ಲರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಿಲ್ಲರ್‌ ಮೇಲೆ ಕೂರಿಸುವಾಗ ಸ್ಪೇರಿಂಗ್ ಹಾಕಿ ಕೂರಿಸಲಾಗುತ್ತದೆ. ಆ ಸ್ಪೇರಿಂಗ್‌ ಸ್ವಲ್ಪ ಪ್ರಮಾಣದಲ್ಲಿ ಜರುಗಿದೆ. ಯಾವುದೇ ತೊಂದರೆ ಇಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ. ಈ ದೃಷ್ಟಿಯಿಂದಲೇ ನಾನು ಜನರೊಂದಿಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದೆ.

ಈ ಬಿರುಕಿನಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಇಡೀ ಮೆಟ್ರೋ ಲೈನ್‌ಅನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !