ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿ ಆಸಕ್ತರಿಗೆ ಈ ಚಾನೆಲ್‌

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮನೆ ಮುಂದೆ ರಂಗೋಲಿ ಹಾಕಿದರೆ ಶುಭ. ಪ್ರತಿದಿನ ಮನೆ ಮುಂದೆ ಬಣ್ಣಬಣ್ಣದ, ಬಗೆಬಗೆ ವಿನ್ಯಾಸದ ರಂಗೋಲಿ ಇದ್ದರೆ ಮನಸ್ಸಿಗೆ ನೆಮ್ಮದಿ. ಪ್ರತಿದಿನ ವಿಭಿನ್ನ ವಿನ್ಯಾಸಗಳನ್ನು ಹಾಕಬೇಕು ಎಂದು ಬಯಸುವವರಿಗೆ ನೂರಾರು ರಂಗೋಲಿ ವಿನ್ಯಾಸಗಳ ಆಯ್ಕೆ ಸುಧಾ ಬಾಲಾಜಿ ಅವರ ‘ರಂಗೋಲಿ ಸ್ಯಾನ್ಸ್‌ ಡಾಟ್‌’ (Sudha Balaji- Rangoli sans dot) ಯುಟ್ಯೂಬ್‌ ಚಾನೆಲ್‌ನಲ್ಲಿದೆ.

ಈ ಯುಟ್ಯೂಬ್‌ ಚಾನೆಲ್‌ನಲ್ಲಿ ನೂರಾರು ಬಗೆಯ ಆಕರ್ಷಕ ರಂಗೋಲಿ ವಿನ್ಯಾಸಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. ಸುಧಾ ಬಾಲಾಜಿ ಅವರ ರಂಗೋಲಿ ಸಂಗ್ರಹದಲ್ಲಿ ಸಾಂಪ್ರದಾಯಿಕ ಹಾಗೂ ಹೊಸ ಬಗೆಯ ವಿನ್ಯಾಸಗಳಿವೆ. ಗೆರೆಯಿಂದ ರಂಗೋಲಿ, ಚುಕ್ಕಿಯಿಂದ ಹಿಡಿದು ಹೂವಿನ ರಂಗೋಲಿ, ಕ್ಯಾಂಡಲ್‌ ಅಥವಾ ದೀಪಗಳಿಂದ ಅಲಂಕರಿಸುವ ರಂಗೋಲಿಗಳ ವಿನ್ಯಾಸಗಳನ್ನು ನೋಡಿ ಕಲಿಯಬಹುದು.

ವಿಡಿಯೊಗಳನ್ನು ನೋಡಿ ರಂಗೋಲಿಯ ಹೊಸ ವಿನ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇದರಲ್ಲಿ ಮೂರು ಚುಕ್ಕೆಯ ಸರಳ ವಿನ್ಯಾಸದ ರಂಗೋಲಿಯಿಂದ ಹಿಡಿದು ಅಂಗಳ ಪೂರ್ತಿ ಹರಡಿಕೊಳ್ಳುವಷ್ಟು ಅಗಲದ ರಂಗೋಲಿ ವಿನ್ಯಾಸಗಳು ಇವೆ. ಉತ್ತಮ ಗುಣಮಟ್ಟದ ವಿಡಿಯೊಗಳ ಎಡಿಟಿಂಗ್ ಸಹ ಚೆನ್ನಾಗಿದೆ. ಹಸಿರು ಗಾಜಿನ ಬಳೆಗಳ ನಡುವೆ ಇಣುಕುವ ಬಂಗಾರದ ಬಳೆಗಳು ಸುಧಾ ಅವರ ಕೈಗಳಿಗೆ ಶೋಭೆ ನೀಡಿದೆ. ರಂಗೋಲಿ ವಿಡಿಯೊಗಳಿಗೆ ಪಾರಂಪರಿಕ ಸ್ಪರ್ಶವನ್ನೂ ಕೊಟ್ಟಿವೆ.

ಯುಗಾದಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದೀಪಾವಳಿ, ನವರಾತ್ರಿ ಸೇರಿದಂತೆ ಪ್ರಮುಖ ಹಬ್ಬಗಳಿಗೆ ಬಿಡಿಸಬಹುದಾದ ರಂಗೋಲಿ ವಿನ್ಯಾಸಗಳೂ ಈ ಚಾನೆಲ್‌ನ ಮತ್ತೊಂದು ಪ್ರಮುಖ ಅಂಶ. ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ಹೆಜ್ಜೆ ಗುರುತುಗಳನ್ನು ಬಿಡಿಸುವಂತಹ ರಂಗೋಲಿಗಳು ಸರಳವಾಗಿ ಆಕರ್ಷಕವಾಗಿವೆ. ಧನುರ್ಮಾಸದಲ್ಲಿ ಬಿಡಿಸುವ ಸಣ್ಣ, ಮಧ್ಯಮ ಹಾಗೂ ಚುಕ್ಕಿ ರಂಗೋಲಿಗಳ ವಿಶೇಷ ಸಂಗ್ರಹ ಇಲ್ಲಿದೆ.

3ರಿಂದ 15 ನಿಮಿಷಗಳ ಅವಧಿಯ ಈ ವಿಡಿಯೊಗಳನ್ನು ನೋಡುತ್ತಾ ರಂಗೋಲಿ ಹಾಕಲು ಪ್ರಯತ್ನಿಸಬಹುದು. ರಂಗೋಲಿ ಹಾಕಲು ಕಲಿಯುವವರು ಹಾಗೂ ರಂಗೋಲಿ ಬಗ್ಗೆ ಆಸಕ್ತಿಯುಳ್ಳ ಮಕ್ಕಳಿಗೆ ಆರಂಭದಲ್ಲಿ ಸಿ.ಡಿ.ಗಳು, ಕಪ್‌ಗಳು, ಚಮಚಗಳನ್ನು ಬಳಸಿಕೊಂಡು ಸುಲಭವಾಗಿ ರಂಗೋಲಿ ಬಿಡಿಸುವ ವಿನ್ಯಾಸಗಳನ್ನೂ ಇದರಲ್ಲಿ ಹೇಳಿಕೊಟ್ಟಿದ್ದಾರೆ. ಹಬ್ಬದ ಸಂದರ್ಭದಲ್ಲಿ ಬಾಗಿಲಿಗೆ ಹಾಕುವ ತೋರಣ ಮಾಡುವ ವಿವರಣೆಯೂ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT