ಗುರುವಾರ , ಜೂಲೈ 2, 2020
28 °C

ಹತಾಶರಾಗಿದ್ದಾರೆ ವಿಶ್ವಾಸ ತುಂಬಿ...

ವೈಟ್‌ಫೀಲ್ಡ್‌ ರೈಸಿಂಗ್‌ ತಂಡ Updated:

ಅಕ್ಷರ ಗಾತ್ರ : | |

prajavani

ರೈಲಿನ ಟಿಕೆಟ್‌ ಸಿಗುವುದು ಖಚಿತವಿಲ್ಲದಿದ್ದರೂ ಪ್ರತಿದಿನ ಗಂಟೆಗಳವರೆಗೆ ಕಾದು, ವಾಪಸ್‌ ಹೋಗಿ, ಪುನಃ ಮಾರನೆಯ ದಿನ ಕಾಯುವುದಕ್ಕಾಗಿ ಬರುವ ಕಾರ್ಮಿಕರ ಬದುಕು ಬಲು ಕಠೋರವಾಗಿದೆ. ನಾವು ಸಾವಿರಾರು ಜನರೊಂದಿಗೆ ಮಾತನಾಡಿದ್ದೇವೆ ಮತ್ತು ಪ್ರತಿ ಬಾರಿಯೂ ಅದೇ ಹೇಳಿಕೆಗಳಿಗೇ ಸಾಕ್ಷಿಯಾಗಿದ್ದೇವೆ:

* ಸತತ ಲಾಕ್‌ಡೌನ್‌ ಕಾರಣದಿಂದ ಕಳೆದ ಎರಡು ತಿಂಗಳಿಂದ ಆದಾಯವಿಲ್ಲ

* ಹೇಗೋ ಉಳಿದುಕೊಂಡಿದ್ದೇನೆ. ಆದರೆ, ನನ್ನ ಹಣ ಮತ್ತು ಆಹಾರ ಮುಗಿದ ನಂತರ ಏನು ಮಾಡಬೇಕು ತಿಳಿದಿಲ್ಲ

* ಕೊರೊನಾ ಸೋಂಕಿನಿಂದ ಇತರ ದೇಶಗಳಲ್ಲಿಯೂ ಜನ ಮೃತಪಟ್ಟಿದ್ದಾರೆ. ನಾನು ಟಿವಿಯಲ್ಲಿ ಪ್ರತಿದಿನ ನೋಡುತ್ತಿದ್ದೇನೆ. ಹೆಚ್ಚು ಜನ ರೋಗಿಗಳಾಗುತ್ತಿದ್ದಾರೆ. ಮನೆಗೆ ಬರುವಂತೆ ನನ್ನ ಕುಟುಂಬ ದುಂಬಾಲು ಬಿದ್ದಿದೆ. ಬಡತನದಲ್ಲಿ ಬದುಕಲು ಮನೆಯ ಮಂದಿ ಸಿದ್ಧರಿದ್ದಾರೆ

* ಯಾವುದೇ ಆದಾಯವನ್ನು ಹೊಂದಿಲ್ಲ. ನಾನು ನನ್ನ ಬಾಡಿಗೆಯನ್ನು ಪಾವತಿಸಿಲ್ಲ. ಆದ್ದರಿಂದ ಮಾಲೀಕರು ನನಗೆ ಕಿರುಕುಳ ನೀಡುತ್ತಿದ್ದಾರೆ

* ಸಾಕು ಎಂದರೆ ಸಾಕು. ನಾನು ಇನ್ನುಮುಂದೆ ಈ ರೀತಿ ಬದುಕಲು ಬಯಸುವುದಿಲ್ಲ

* ನಾನು ಇಲ್ಲಿಗೆ ಬಂದಿದ್ದು, ಕಷ್ಟಪಟ್ಟು ದುಡಿಯಬಹುದು ಮತ್ತು ಜೀವನವು ಉತ್ತಮವಾಗಿರುತ್ತದೆ ಎಂದು. ಆದರೆ, ಈಗ ನನಗೆ ಸಂಪಾದನೆ ಇಲ್ಲ. ಇಲ್ಲಿಯೇ ಸಾಯುತ್ತೇನೆ ಎಂಬ ಭಯ. ಪ್ರಾಣವನ್ನೂ ಪಣಕ್ಕಿಟ್ಟು ಮನೆಗೆ ತಲುಪಲು ಸಿದ್ಧ– ಇಂತಹದ್ದೇ ಕರಳು ಹಿಂಡುವ ಹೇಳಿಕೆಗಳು.

ಕಾರ್ಮಿಕರ ಹತಾಶೆಯ ಸ್ಥಿತಿ ಇದು. ಸತತ ಪ್ರಯತ್ನಿಸಿದರೂ ರೈಲು ಟಿಕೆಟ್ ಪಡೆಯಲು ಸಾಧ್ಯವಾಗದ ಕಾರಣ, ಬೆಂಗಳೂರಿನಿಂದ ಬಿಹಾರಕ್ಕೆ ಕರೆದೊಯ್ಯಲು ಟ್ರಕ್ ಚಾಲಕನಿಗೆ ₹1.36 ಲಕ್ಷ ಹಣವನ್ನು ಪಾವತಿಸಿದ ಗುಂಪೊಂದು ಅವರು ಎಷ್ಟೊಂದು ಹತಾಶರಾಗಿ
ದ್ದಾರೆ ಎಂಬುದನ್ನು ತೋರಿಸುತ್ತದೆ. ಆ ಗುಂಪೇನೋ ನಮ್ಮ ಸ್ವಯಂಸೇವಕರ ನೆರವಿನಿಂದ ಬಚಾವಾಯಿತು. ಇನ್ನೂ ಎಷ್ಟು ಗುಂಪುಗಳು ಹತಾಶೆಯಲ್ಲಿ ಮುಂದುವರಿಯುತ್ತಿವೆ ಎಂದು ಯಾರಿಗೆ ತಿಳಿದಿದೆ?

ಹಡಗು ಸಾಗಿದೆ, ನಾವು ಈಗ ಏನು ಮಾಡಬಹುದು?

ಸಂಗ್ರಹಿಸಿದ ಸೆಸ್ ಹಣವನ್ನು - ₹8000 ಕೋಟಿ - ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು. ಹತಾಶವಾಗಿ ಹೋಗುತ್ತಿರುವ ಕಾರ್ಮಿಕರು ನಮ್ಮ ಮೆಟ್ರೊ, ರಸ್ತೆ, ಶಾಲೆ ಮತ್ತು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ನಮಗೆ ಬೇಕಾದವರು ಎಂಬುದನ್ನು ನಾವು ಮರೆಯಬಾರದು. ಅವರೂ ಕುಟುಂಬಗಳನ್ನು, ಭಾವನೆಗಳನ್ನು, ಆತಂಕಗಳನ್ನು ಹೊಂದಿರುವವರು ಮತ್ತು ನಮ್ಮೆಲ್ಲರಂತೆಯೇ ಮಾನವ ಅಗತ್ಯಗಳನ್ನು ಹೊಂದಿರುವ ಜನ ಎಂಬುದನ್ನೂ ನೆನಪಿಡಬೇಕು.

ಅರಮನೆ ಮೈದಾನ ಮತ್ತು ಪೊಲೀಸ್ ಠಾಣೆಗಳಲ್ಲಿ ಸೇರುವ ಜನರ ನೋವನ್ನು ನಿವಾರಿಸಲು ನಾವು ಏನಾದರೂ ಮಾಡಬಹುದೇ? ನಮ್ಮ ಸಲಹೆಗಳು ಇಲ್ಲಿವೆ:

1. ನಗದು ವರ್ಗಾವಣೆಯನ್ನು ವೇಗಗೊಳಿಸಿ ಮತ್ತು ವಿಶ್ವಾಸ ಹುಟ್ಟಿಸಲು ವಿತರಿಸಿದ ಮೊತ್ತವನ್ನು ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಪ್ರಕಟಿಸಿ

2. ಅಕ್ಕಿ ಮತ್ತು ಗೋಧಿಯ ಜೊತೆಗೆ ಕಿರಾಣಿ ವಸ್ತುಗಳನ್ನು ತಾತ್ಕಾಲಿಕವಾಗಿ ಸೇರಿಸಲು ರೇಷನ್ ಅನ್ನು ಹೆಚ್ಚಿಸಿ

3. ಒಂದು ತಿಂಗಳ ನಂತರ ಕೆಲಸ ಪುನರಾರಂಭಿಸದಿದ್ದರೆ, ಅವರು ರೇಷನ್ ಮತ್ತು ಹಣದ ಮತ್ತೊಂದು ಭಾಗವನ್ನು ಪಡೆಯುತ್ತಾರೆ ಎಂಬ ಭರವಸೆ ನೀಡಿ

4. ಮನೆಗೆ ಹೋಗಲು ಬಯಸಿದರೆ, ರೈಲುಗಳ ವ್ಯವಸ್ಥೆ ಮಾಡಿ, ಆರಾಮವಾಗಿ ತಲುಪುವಂತೆ ನೋಡಿಕೊಳ್ಳಿ

(ಬೆಂಗಳೂರಿನ ವೈಟ್‌ಫೀಲ್ಡ್‌ ರೈಸಿಂಗ್‌ ತಂಡವು ವಲಸೆ ಕಾರ್ಮಿಕರಿಗೆ ನೆರವಿನಹಸ್ತ ಚಾಚಿದೆ. ತವರಿಗೆ ತೆರಳಲು ಹೊರಟವರ ನೆರವಿಗೂ ಬಂದಿದೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು