ಪತ್ನಿ ಗೆಲುವು; ಪತಿಗೆ ಹಾಲಿನ ಅಭಿಷೇಕ

7

ಪತ್ನಿ ಗೆಲುವು; ಪತಿಗೆ ಹಾಲಿನ ಅಭಿಷೇಕ

Published:
Updated:

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆಲುವು ಸಾಧಿಸಿದ ಕಾರಣ ಪತಿಗೆ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.‌ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೆಡಿಎಸ್‌ನ ರುಕ್ಮಿಣಿ 36ನೇ ವಾರ್ಡ್‌ನಿಂದ (ಯರಗನಹಳ್ಳಿ ಅಂಬೇಡ್ಕರ್‌ ಕಾಲೊನಿ) ಪಾಲಿಕೆಗೆ ಆಯ್ಕೆಯಾಗಿದ್ದಾರೆ. ಪಾಲಿಕೆ ಸದಸ್ಯೆಯೂ ಆಗಿದ್ದ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ವಿರುದ್ಧ 393 ಮತಗಳಿಂದ ಗೆದ್ದಿದ್ದಾರೆ. ಗೆದ್ದ ಖುಷಿಯಲ್ಲಿ ಪತಿ ಮಾದೇಗೌಡರ ತಲೆ ಮೇಲೆ ಕಾರ್ಯಕರ್ತರು ಬಿಂದಿಗೆಯಲ್ಲಿ ಹಾಲು ತುಂಬಿ ಸುರಿದಿದ್ದಾರೆ. ಬಳಿಕ ನೀರು ಹಾಕಿದ್ದಾರೆ. ಮಾದೇಗೌಡ ಶ್ರೀರಾಂಪುರ ಜಿಲ್ಲಾ ಪಂಚಾಯತಿ ಸದಸ್ಯ.

‘ವಾರ್ಡ್‌ನ ಹಲವು ಕಡೆ ನನ್ನ ಮೇಲೆ ಅಭಿಮಾನಿಗಳು ಹಾಲು ಸುರಿದರು. ಅವರ ಸಂಭ್ರಮಕ್ಕೆ ನಾನೇಕೆ ಅಡ್ಡಿ ಉಂಟು ಮಾಡಲಿ’ ಎಂದು ಮಾದೇಗೌಡ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !