ಮಂಗಳವಾರ, ಆಗಸ್ಟ್ 3, 2021
21 °C

ರೈತರಿಂದ ಖರೀದಿಸುವ ಹಾಲಿನ ದರ 1 ಲೀಟರ್‌ಗೆ ₹ 1.50 ಇಳಿಸಿದ ಮೈಸೂರು ಹಾಲು ಒಕ್ಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ರೈತರು ಮತ್ತು ಹೈನುಗಾರರಿಂದ ಖರೀದಿಸುವ ಹಾಲಿನ ದರವನ್ನು ಬುಧವಾರದಿಂದಲೇ (ಜುಲೈ 8) ತಗ್ಗಿಸಿದೆ.

ಜುಲೈ 3ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ ತಗ್ಗಿಸುವ ಕುರಿತಂತೆ ಚರ್ಚೆ ನಡೆಸಿದ್ದು, ಭವಿಷ್ಯದಲ್ಲೂ ರೈತರ ಹಿತ ಕಾಯಲಿಕ್ಕಾಗಿಯೇ, ಹಾಲಿನ ಸುಗ್ಗಿ ಹೆಚ್ಚಿರುವುದರಿಂದ 1 ಲೀಟರ್ ಹಾಲಿಗೆ ₹ 1.50 ಕಡಿಮೆ ಮಾಡಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ತಿಳಿಸಿದ್ದಾರೆ.

ಜುಲೈ 7ರವರೆಗೂ ರೈತರಿಗೆ 1 ಲೀಟರ್ ಹಾಲಿಗೆ ₹ 26.50 ಪಾವತಿಸಲಾಗುತ್ತಿತ್ತು. ಕೋವಿಡ್‌ ಸಂಕಷ್ಟದಲ್ಲೂ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಬಟವಾಡೆ ಮಾಡಲಿಕ್ಕಾಗಿ ಇನ್ಮುಂದೆ ₹ 25 ಪಾವತಿಸಲಾಗುವುದು. ಇದು ತಾತ್ಕಾಲಿಕ ಪರಿಷ್ಕರಣೆಯಷ್ಟೇ ಎಂದು ಹೇಳಿದ್ದಾರೆ.

ಪ್ರಸ್ತುತ ಮೈಮುಲ್‌ ನಿತ್ಯವೂ 7 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಈಗಿನ ಸುಗ್ಗಿ ಅವಧಿಯಲ್ಲಿ ಇದು 7.5 ಲಕ್ಷ ಲೀಟರ್‌ಗೆ ಹೆಚ್ಚಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಾಲು ಸಂಗ್ರಹಣೆ ಶೇ 10ರಷ್ಟು ಹೆಚ್ಚಿದೆ. ಆದರೆ ಕೋವಿಡ್‌ನಿಂದ ಮಾರಾಟ ಶೇ 15ರಷ್ಟು ತಗ್ಗಿದೆ. ಹಾಲಿನ ಸುಗ್ಗಿಯಲ್ಲಿ ರಾಜ್ಯದಲ್ಲಿನ ಎಲ್ಲ ಒಕ್ಕೂಟಗಳು ದರ ತಗ್ಗಿಸುವುದು ವಾಡಿಕೆಯಾಗಿದೆ ಎಂದು ಸಿದ್ದೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕೂಟದಲ್ಲಿ ₹ 30 ಕೋಟಿ ಮೌಲ್ಯದ ಹಾಲಿನ ಪೌಡರ್, ಬೆಣ್ಣೆ ದಾಸ್ತಾನಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು