ಮಂಗಳವಾರ, ಏಪ್ರಿಲ್ 7, 2020
19 °C
ಚಿಕ್ಕಮಗಳೂರು ಹಬ್ಬ ಅಂಗವಾಗಿ ಕ್ರೀಡೋತ್ಸವ ಆಯೋಜನೆ

ಕೆಸರುಗದ್ದೆಯಲ್ಲಿ ಬಿದ್ದು, ಎದ್ದು ಓಡಿದ ಸಚಿವ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಯುವಜನ ಸಬಲೀಕರಣ–ಕ್ರೀಡಾ ಸಚಿವ ಸಿ.ಟಿ.ರವಿ ಅವರು ಕೆಸರು ಗದ್ದೆ ಓಟ ಸ್ಪರ್ಧೆಯಲ್ಲಿ, ಬಿದ್ದು ಎದ್ದು ಓಡಿ ಗಮ್ಯ ತಲುಪಿದ ಪರಿ ಗಮನ ಸೆಳೆಯಿತು.

ಚಿಕ್ಕಮಗಳೂರು ಹಬ್ಬ (ಜಿಲ್ಲಾ ಉತ್ಸವ) ಅಂಗವಾಗಿ ಆಯೋಜಿಸಿರುವ ಕ್ರೀಡೋತ್ಸವದ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಸಚಿವ ರವಿ ರಾಜಕಾರಣಿಗಳ ವಿಭಾಗದಲ್ಲಿ ಭಾಗವಹಿಸಿದ್ದರು. ಬರ್ಮುಡಾ ಚಡ್ಡಿ, ಟಿ ಶರ್ಟ್‌ ಧರಿಸಿ ಗದ್ದೆಗಿಳಿದ ರವಿ ಸ್ಪರ್ಧಿಗಳೊಂದಿಗೆ ಬಿರುಸಾಗಿ ಓಡಿದರು.

ಆರಂಭದಲ್ಲಿ ವೇಗ ಕಾಪಾಡಿಕೊಂಡು ಮುಂದಿದ್ದ ರವಿ ಅವರು ಗಮ್ಯದ ಸನಿಹಕ್ಕೆ ಬಂದಾಗ ಮುಗ್ಗರಿಸಿದರು. ಮೂರು ಬಾರಿ ಬಿದ್ದರೂ ಬಿಡದೆ ಗಮ್ಯ ತಲುಪಿದರು.

ಕೆಸರು ಗದ್ದೆಯಲ್ಲಿ ನಡೆದ ಹಗ್ಗ ಜಗ್ಗಾಟದಲ್ಲೂ ಸಚಿವ ರವಿ ಭಾಗವಹಿಸಿದ್ದರು. ಕ್ರೀಡಾ ಸಚಿವರ ಉತ್ಸಾಹ–ಉಲ್ಲಾಸ ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಚಿಕ್ಕಮಗಳೂರಿನಲ್ಲಿ ಇದೇ 28ರಿಂದ ಮಾರ್ಚ್‌ 1ರವರೆಗೆ ಚಿಕ್ಕಮಗಳೂರು ಹಬ್ಬ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು