ಸಾರಿಗೆ ಸಚಿವರಿಗೆ ಪುತ್ರಿಯ ಅಹವಾಲು

7

ಸಾರಿಗೆ ಸಚಿವರಿಗೆ ಪುತ್ರಿಯ ಅಹವಾಲು

Published:
Updated:

ಮದ್ದೂರು: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಜನಸಂಪರ್ಕ ಸಭೆಯಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರಿ ಡಿ.ಟಿ.ಸಂಗೀತಾ ಅವರು ಸರತಿ ಸಾಲಿನಲ್ಲಿ ನಿಂತು ಸಚಿವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಅಲಸಗೆರೆ, ಮೊಬ್ಬಲಗೆರೆಯಲ್ಲಿ ಈಚೆಗೆ ಜಮೀನು ಖರೀದಿಸಿದ್ದು, ಖಾತೆ ಬದಲಾವಣೆ ಹಾಗೂ ಸರ್ವೆ ಮಾಡಿಸಿಕೊಡುವಂತೆ ಅವರು ಮನವಿ ಮಾಡಿದರು. ಪುತ್ರಿ ಮನವಿ ಸಲ್ಲಿಸಿದ್ದನ್ನು ಕಂಡು ಕ್ಷಣ ಕಾಲ ಅಚ್ಚರಿಗೆ ಒಳಗಾದ ಸಚಿವರು, ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ರಾಜೇಶ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !