ಹುಬ್ಬಳ್ಳಿಯಲ್ಲಿ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

7

ಹುಬ್ಬಳ್ಳಿಯಲ್ಲಿ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Published:
Updated:

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್, ಬಾರ್, ವಾಣಿಜ್ಯ ವಹಿವಾಟು ಅರ್ಧದಷ್ಟು ಬಂದ್ ಆಗಿದೆ. ಸದಾ ವಾಹನ- ಜನ ದಟ್ಟಣೆ ಇರುತ್ತಿದ್ದ ಚನ್ನಮ್ಮ ವೃತ್ತ ಖಾಲಿ ಹೊಡೆಯುತ್ತಿದೆ. ವೃತ್ತದ ಸುತ್ತ ಮುತ್ತ ಬಹುತೇಕ ಅಂಗಡಿಗಲಕು ಬಂದ್ ಆಗಿವೆ.

ವಾಣಿಜ್ಯ ಚಟುವಟಿಕ ನಡೆಯುವ ಕೊಪ್ಪಿಕರ್ ರಸ್ತೆ, ಸ್ಟೇಷನ್ ರಸ್ತೆ, ಲಕ್ಷ್ಮಿ ಮಾಲ್ ರಸ್ತೆಯಲ್ಲಿ ಸಾಕಷ್ಟು ಅಂಗಡಿಗಳು ಬಂದ್ ಆಗಿವೆ.

ಸರ್ಕಾರಿ, ಖಾಸಗಿ ಬಸ್ ಸೇವೆ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಧ್ಯೆ ಸಾರಿಗೆ ಸೇವೆ ನೀಡುವ ಬಿಆರ್ ಟಿಎಸ್ ಸಹ ಬಂದ್ ಇರುವುದರಿಂದ ಜನರು ಪರದಾಡುವಂತಾಗಿದೆ. ದುಬಾರಿ ಹಣ ನೀಡಿ ಆಟೊರಿಕ್ಷಾ ಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಆಟೊಗಳ ಸಂಖ್ಯೆಯೂ ಕಡಿಮೆ ಇದೆ.

ಇವನ್ನೂ ಓದಿ

ಬೆಂಗಳೂರು-ತುಮಕೂರು ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೆ ತಡೆ

ಶುರುವಾಗಿವೆ ಪ್ರತಿಭಟನೆಗಳು, ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !