ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನ್ಯಾಯಾಂಗ ಬಂಧನ ವಿಸ್ತರಣೆ

ಸೋಮವಾರ, ಮಾರ್ಚ್ 25, 2019
24 °C

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನ್ಯಾಯಾಂಗ ಬಂಧನ ವಿಸ್ತರಣೆ

Published:
Updated:

ರಾಮನಗರ: ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ಸಿಜೆಎಂ ನ್ಯಾಯಾಲಯವು ಇದೇ 19ರವರೆಗೆ ವಿಸ್ತರಿಸಿತು‌.

ಅವರ ನ್ಯಾಯಾಂಗ ಬಂಧನದ ಅವಧಿಯು ಬುಧವಾರ ಮುಗಿದಿದ್ದು, ಅನಾರೋಗ್ಯದ ಕಾರಣ ಆರೋಪಿ ಶಾಸಕ  ವಿಚಾರಣೆಗೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ನ್ಯಾಯಾಂಗ ಬಂಧನವನ್ನು‌ ಮತ್ತೆ 14 ದಿನ‌ ವಿಸ್ತರಿಸಿ ನ್ಯಾಯಾಧೀಶೆ ಅನಿತಾ ಆದೇಶ ನೀಡಿದರು.‌

ಶಾಸಕ ಆನಂದ ಸಿಂಗ್ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ಗಣೇಶರನ್ನು ಬಿಡದಿ ಪೊಲೀಸರು ಫೆ.20ರಂದು ಬಂಧಿಸಿದ್ದರು.‌ 21ರಂದು ಅವರನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಇದೇ 6ರವರೆಗೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಂತೆ ಸೂಚಿಸಿತ್ತು.‌

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !