ಅನುದಾನ ಹಿಂದಿರುಗಿಸಿದ ಶಾಸಕ ಗೂಳಿಹಟ್ಟಿ

7

ಅನುದಾನ ಹಿಂದಿರುಗಿಸಿದ ಶಾಸಕ ಗೂಳಿಹಟ್ಟಿ

Published:
Updated:
Deccan Herald

ಚಿತ್ರದುರ್ಗ: ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾ‍ಪ್ತಿಯ ದೇಗುಲಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದ ₹ 8 ಲಕ್ಷ ಅನುದಾನವನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮರಳಿಸಿದ್ದಾರೆ.

ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ಅವರ ಕಚೇರಿಗೆ ಅನುದಾನ ಹಿಂದಿರುಗಿಸಿದ ಶಾಸಕರು, ಪತ್ರವೊಂದನ್ನು ನೀಡಿದ್ದಾರೆ. ‘ಈ ಅನುದಾನವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕ್ಷೇತ್ರದ ದೇಗುಲಗಳಿಗೆ ನೀಡಿ’ ಎಂಬ ಸಲಹೆ ಕೊಟ್ಟಿದ್ದಾರೆ.

ಮುಜರಾಯಿ ಇಲಾಖೆ ಹಳೆಕುಂದೂರು ಗ್ರಾಮದ ಆಂಜನೇಯಸ್ವಾಮಿ ಜೀರ್ಣೋದ್ಧಾರಕ್ಕೆ ₹ 8 ಅನುದಾನ ಹಂಚಿಕೆ ಮಾಡಿದೆ.

‘ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ. ಲಕ್ಷಗಳ ಲೆಕ್ಕದಲ್ಲಿ ಹಣ ನೀಡಿದರೆ ಯಾವುದಕ್ಕೂ ಸಾಕಾಗುವುದಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಿದ್ದು, ಜನರಿಗೆ ಉತ್ತರಿಸುವುದು ಕಷ್ಟವಾಗಿದೆ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !