ಶಾಸಕ ಕುಮಠಳ್ಳಿ ಕಾಣೆ– ಪೊಲೀಸ್‌ ಠಾಣೆಗೆ ದೂರು

7

ಶಾಸಕ ಕುಮಠಳ್ಳಿ ಕಾಣೆ– ಪೊಲೀಸ್‌ ಠಾಣೆಗೆ ದೂರು

Published:
Updated:

ಅಥಣಿ: ‘ಶಾಸಕ ಮಹೇಶ ಕುಮಠಳ್ಳಿ ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನು ಅಪಹರಿಸಿ, ಗೃಹ ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ. ಕೂಡಲೇ ಅವರನ್ನು ಹುಡುಕಿಕೊಡಿ’ ಎಂದು ಅಥಣಿ ಯೂಥ್‌ ಕಾಂಗ್ರೆಸ್‌ ಕಾರ್ಯದರ್ಶಿ ಪ್ರಮೋದ ಹಿರೇಮನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇಲ್ಲಿನ ಪೊಲೀಸ್‌ ಠಾಣೆಗೆ ಗುರುವಾರ ದೂರು ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳೆದ 50 ದಿನಗಳಿಂದ ನಮ್ಮ ಕೈಗೆ ಶಾಸಕರು ಸಿಗುತ್ತಿಲ್ಲ. ಕಳೆದ ತಿಂಗಳು 26ರಂದು ಕೆಲಹೊತ್ತು ಕಾಣಿಸಿಕೊಂಡಿದ್ದರು. ನಂತರ ಪುನಃ ಕಣ್ಮರೆಯಾದರು. ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಕ್ಷೇತ್ರದ ಜನರಿಗೆ ಶಾಸಕರು ಸಿಗದಂತಹ ಪರಿಸ್ಥಿತಿ ಇದೆ’ ಎಂದರು.

‘ಯಾವುದೇ ಸಭೆ, ಸಮಾರಂಭಗಳನ್ನು ನಡೆಸಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗಿಲ್ಲ. ಎರಡು ಸಲ ಪಕ್ಷದ ಮುಖಂಡರು ನೋಟಿಸ್‌ ನೀಡಿದ್ದರೂ ಉತ್ತರಿಸಿಲ್ಲ. ಅವರನ್ನು ಅಪಹರಿಸಿರುವ ಶಂಕೆ ನಮಗಿದೆ. ತಕ್ಷಣ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !