ಭಾನುವಾರ, ಸೆಪ್ಟೆಂಬರ್ 15, 2019
30 °C

ಶಾಸಕ ರಾಮದಾಸ್ ಕಾರು ಅಪಘಾತ: ಅಪಾಯದಿಂದ ಪಾರು

Published:
Updated:

ಮಂಗಳೂರು: ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಶಾಸಕ‌ ರಾಮದಾಸ್ ಅವರ ಕಾರು‌ ಸುಳ್ಯ ತಾಲ್ಲೂಕಿನ‌ ಜಾಲ್ಸೂರು ಬಳಿ ಚರಂಡಿ‌ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ರಾಮದಾಸ್ ಹಾಗೂ ಅವರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಪಕ್ಕದಲ್ಲಿಯೇ ಇರುವ‌ ಪೆಟ್ರೋಲ್ ಬಂಕ್‌ನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಸಹೋದರನ ಪುತ್ರ‌ ಆಶಿಕ್ ಅವರು ಸ್ಥಳಕ್ಕೆ ಬಂದು, ರಾಮದಾಸ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಾಲಕನ ನಿದ್ರೆ ಮಂಪರಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Post Comments (+)