ಮಂಗಳವಾರ, ಡಿಸೆಂಬರ್ 10, 2019
26 °C

‘ಎಂಎಲ್‌ಎ ಬದನೆಕಾಯಿ ಅಲ್ಲ ಮಾರಾಟವಾಗಲು’: ಶಾಸಕ ಸಿ.ಎಸ್‌. ಶಿವಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಎಂಎಲ್ಎ ಬದನೆಕಾಯಿ ಅಲ್ಲ ಮಾರಾಟವಾಗಲು, ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ’ ಎಂದು ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಹೇಳಿದರು.

ಆಪರೇಷನ್‌ ಕಮಲ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗುರುವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಕಮಲಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ, ಇದಕ್ಕಾಗಿ ಹಿರಿಯ ನಾಯಕರಿಗೆ ಮನವಿಯನ್ನೂ ಮಾಡಿದ್ದೇನೆ. ಅವಕಾಶ ಸಿಗದೆ ಇದ್ದರೂ ಆ ವಿಷಯವನ್ನು ಸಹ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದರು.

‘ಇದೇ 22ರಂದು ಸಂಪುಟ ವಿಸ್ತರಣೆಗೆ ಹಿರಿಯರು ನಿರ್ಧರಿಸಿದ್ದಾರೆ. ಅಂದೇ ವಿಸ್ತರಣೆ ಆಗುವ ವಿಶ್ವಾಶ ಇದೆ. ಮತ್ತೆ ಮುಂದಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು